ಪುಣೆ: ಶ್ರೀ ಶಕ್ತಿದರ್ಶನ್ ಯೋಗಾಶ್ರಮದಲ್ಲಿ ಸುಮಾರು 26 ಬಗೆಯ ದೇಸಿ ತಳಿಗಳ ಗೋವುಗಳನ್ನು ಸಾಕಲಾಗುತ್ತಿದ್ದು, ಗೋಸಂರಕ್ಷಣೆಯ ಬಗ್ಗೆ ಆಶ್ರಮದ ಮೂಲಕ ವ್ಯಾಪಕ ಜನಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆ ಪ್ರಯುಕ್ತ ಪುಣೆಯಲ್ಲಿಯೂ ನೃತ್ಯ ನಾಟಕವನ್ನು ಪ್ರಸ್ತುತಪಡಿಸಿ ಜನರಿಗೆ ಗೋವುಗಳ ರಕ್ಷಣೆಯ ಬಗ್ಗೆ ಕಾಳಜಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಯಾವುದೇ ವ್ಯಾವಹಾರಿಕ ದೃಷ್ಟಿಕೋನದಿಂದ ವ್ಯವಹರಿಸದೆ ಉಚಿತವಾಗಿ ಆಶ್ರಮಕ್ಕೆ ಗೋವುಗಳನ್ನು ಪಡೆದುಕೊಂಡು ಸಾಕಲಾಗುತ್ತದೆ. ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ಪೂಜ್ಯತಾ ಭಾವನೆಯನ್ನು ನೀಡಲಾಗಿದ್ದು, ಗೋವುಗಳ ಸಂತತಿಯನ್ನು ಗೌರವದಿಂದ ಕಾಣುವಂತಾಗಿ ಗೋವುಗಳ ಸಂರಕ್ಷಣೆಯನ್ನು ಮಾಡುವ ಉದ್ದೇಶ ನಮ್ಮದಾಗಿದೆ. ಮೊದಲ ಗೋಶಾಲೆಯನ್ನು ಕೇರಳದಲ್ಲಿ ಆರಂಭಿಸಲಾಗಿದ್ದು, ನಮ್ಮ ಆಶ್ರಮದಲ್ಲಿಯೂ ವಿಶೇಷವಾಗಿ ಗೋವುಗಳ ಬಗ್ಗೆ ಆಸ್ಥೆ ವಹಿಸಿ ಸಾಕಲಾಗುತ್ತದೆ. ಗೋಮಾತೆಯ ಲಾಲನೆ ಪಾಲನೆಯಲ್ಲಿ ನಮ್ಮ ಮನಸ್ಸಿಗೆ ಶಾಂತಿ ದೊರಕುತ್ತದೆ ಎಂದು ಶಕ್ತಿದರ್ಶನ್ ಯೋಗಾಶ್ರಮ ಕಿನ್ನಿಗೋಳಿಯ ಯೋಗಾಚಾರ್ಯ ದೇವಬಾಬಾ ಅವರು ನುಡಿದರು.
ನ. 1ರಂದು ಪುಣೆಯ ನೆಹರೂ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿದರ್ಶನ್ ಯೋಗಾಶ್ರಮ ಕಿನ್ನಿಗೋಳಿ ವತಿಯಿಂದ ನಡೆದ ವಿಶ್ವಮಾತಾ ಗೋಮಾತಾ ನೃತ್ಯನಾಟಕವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಮಾತನಾಡಿ ಎಲ್ಲರ ಸಹಕಾರ ಬಯಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಮಹಾರಾಷ್ಟ್ರ ಗೋ ವಿಜ್ಞಾನ ಪರಿಷದ್ ಇದರ ಹಾಗೂ ಪುಣೆ ಇಸ್ಕಾನ್ ಸಂಸ್ಥೆಯ ವಿಶ್ವಸ್ತರಾದ ಶ್ವೇತದ್ವೀಪ್‌ದಾಸ್ ಅವರು ಮಾತನಾಡಿ, ಇಸ್ರೇಲ್ ದೇಶ ಕೃಷಿಗೆ ಪ್ರಸಿದ್ಧವಾಗಿದೆ. ಚೀನಾ ಮತ್ತು ಜಪಾನ್ ದೇಶಗಳು ತಂತ್ರಜ್ಞಾನಕ್ಕೆ ಹೆಸರಾಗಿವೆ. ಆದರೆ ನಮ್ಮ ದೇಶ ಗೋಮಾತೆಗೆ ಪ್ರಸಿದ್ಧವಾಗಿದೆ. ನಾವು ಪಾವಿತ್ರÂತೆಯಿಂದ ಕಾಣುವ ಗೋವುಗಳನ್ನು ಪ್ರೀತಿಸಿ ಅವುಗಳನ್ನು ರಕ್ಷಣೆ ಮಾಡಿ ಪ್ರಾಧಾನ್ಯ ನೀಡುವಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ವೇದಿಕೆಯಲ್ಲಿ ವಿದ್ಯಾವಾಚಸ್ಪತಿ ಅಶೋಕ್ ಬಾಬಾ, ಓಂ ನಿತ್ಯಾನಂದ ವರ್ಲ್ಡ್ ಹೆಲ್ತ… ಕೇರ್ ಇದರ ಸಂಸ್ಥಾಪಕರಾದ ಡಾ| ಕೆ. ವಾಸು, ಪ್ರಸಿದ್ಧ ಹಿಂದುಸ್ಥಾನಿ ಕ್ಲಾಸಿಕಲ… ಗಾಯಕ ಪಂಡಿತ್ ಉಪೇಂದ್ರ ಭಟ್, ಮಹಾರಾಷ್ಟ್ರ ಗೋ ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥರಾದ ಮಿಲಿಂದ್ ಎಕೊºàಟೆ ಹಾಗೂ ವಿಶ್ವಮಾತಾ ಗೋಮಾತಾ ನೃತ್ಯ ನಾಟಕದ ನಿರ್ದೇಶಕರಾದ ಕೆ. ವಿ. ರಮಣ್ ಉಪಸ್ಥಿತರಿದ್ದರು. ಅನುರಾಧಾ ಅವರು ಪ್ರಾರ್ಥನೆಗೈದರು.
ಈ ಸಂದರ್ಭ 9 ಜನರಿಂದ ಏಕಕಾಲದಲ್ಲಿ ನಡೆದ ಶಂಖನಾದವು ಸೇರಿದ್ದ ಜನರನ್ನು ಮಂತ್ರಮುಗ್ಧಗೊಳಿಸಿತು. ಮುಂಬಯಿಯ ಅತುಲ… ಗುಪ್ತಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಕ್ತಿದರ್ಶನ್ ಯೋಗಾಶ್ರಮ ಹಾಗೂ ಗೋವಿನ ರಕ್ಷಣೆಯ ಬಗೆಗಿನ ವಿವರಗಳನ್ನು ಸಾಕ್ಷ್ಯಚಿತ್ರಗಳ ಮೂಲಕ ಪ್ರದರ್ಶಿಸಲಾಯಿತು. ಅನಂತರ ಕೆ. ವಿ. ರಮಣ್ ಪರಿಕಲ್ಪನೆ, ಸಂಗೀತ ಹಾಗೂ ನಿರ್ದೇಶನದಲ್ಲಿ ಡಾ| ಪ್ರಭಾಕರ್ ಜೋಶಿ ಅವರ ಗೀತ ರಚನೆಯಲ್ಲಿ ವಿಶ್ವಮಾತಾ ಗೋಮಾತಾ ನಾಟಕ ಪ್ರದರ್ಶನಗೊಂಡು ಸಭಾಂಗಣ ಪೂರ್ತಿ ತುಂಬಿದ್ದ ಪ್ರೇಕ್ಷಕರ ಮುಕ್ತಕಂಠದ ಶ್ಲಾಘನೆಗೆ ಪಾತ್ರವಾಯಿತು. ಸಂಸ್ಥೆಯ ವತಿಯಿಂದ ಪ್ರಸಾದವನ್ನು ಹಂಚಲಾಯಿತು. ಶಕ್ತಿದರ್ಶನ್ ಯೋಗಾಶ್ರಮದ ಪುಣೆಯ ಶಿಷ್ಯವೃಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿತ್ತು.