Advertisement
ಕಿನ್ನಿಗೋಳಿ ಪರಿಸರದ ಹೆಚ್ಚಿನ ರೈತರು ತರಕಾರಿ ಬೆಳೆಯುವವರು. ರೈತರು ಬೆಳೆದ ತರಕಾರಿ, ಹಣ್ಣು ಹಂಪಲು ನೇರ ಮಾರುಕಟ್ಟೆಗೆ ತಲುಪಿಸುವ ನಿಟ್ಟಿನಲ್ಲಿ ರೈತರ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣವಾಗಿದ್ದರೂ ಅದರ ಉದ್ದೇಶ ಸಫಲವಾಗಿಲ್ಲ.
Related Articles
ಆರು ವರ್ಷಗಳ ಹಿಂದೆ ನಿರ್ಮಿಸಿದ ಎರಡು ಅಂತಸ್ತಿನ ಕಟ್ಟಡ ನಿಜಕ್ಕೂ ಚೆನ್ನಾಗಿದೆ. ಕಾಮಗಾರಿಯೂ ಉತ್ತಮವಾಗಿದೆ. ಅಲ್ಲಿಗೆ ಹೋಗಲು ಕಾಂಕ್ರೀಟ್ ರಸ್ತೆ ಕೂಡ ನಿರ್ಮಾಣವಾಗಿದೆ. ಆದರೆ, ದುರಂತವೆಂದರೆ ಅದನ್ನು ಬಳಕೆ ಮಾಡದೆ ಇರುವುದರಿಂದ ಸಂಪೂರ್ಣ ಮುಳ್ಳು ಪೊದೆ ಆವರಿಸಿಕೊಂಡು ಮುಖ್ಯ ರಸ್ತೆಯಲ್ಲಿ ನಿಂತರೆ ಅಲ್ಲೊಂದು ಕಟ್ಟಡವಿದೆ ಎನ್ನುವುದೂ ಅರಿವಿಗೆ ಬರುವುದಿಲ್ಲ. ಅಷ್ಟರ ಮಟ್ಟಿಗೆ ಪೊದೆ, ಮರಗಳಿಂದ ಮರೆಯಾಗಿದೆ. ಮೇಲಿನ ಮಹಡಿಗೆ ಹೋಗುವ ಏಣಿಯ ತುಂಬ ಮುಳ್ಳು ಪೊದೆ ತುಂಬಿಹೋಗಿದೆ.
Advertisement
ಸರಕಾರದ ಹಣ ಪೋಲುಸರಕಾರ ಗ್ರಾಮೀಣ ಪ್ರದೇಶದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಪರಿಚಯಿಸಿ ಕಾರ್ಯಗತ ಮಾಡುತ್ತಿದೆ. ಆದರೆ ಅದು ಯಾವ ಹಂತದಲ್ಲಿದೆ, ಸದ್ಬಳಕೆ ಆಗುತ್ತಿದೆಯೇ ಎಂಬ ಪರಾಮರ್ಶೆ ನಡೆಯುತ್ತಿಲ್ಲ. ಅದರಲ್ಲಿ ಆಡಳಿತ ಯಂತ್ರ ಹಾಗೂ ಅಧಿಕಾರಿ ವರ್ಗದ ನಿರ್ಲಕ್ಷ್ಯದ ಪ್ರಮಾಣ ಹೆಚ್ಚೇ ಇದೆ. -ರಘನಾಥ್ ಕಾಮತ್ ಕೆಂಚನಕೆರೆ