Advertisement

ರಸ್ತೆ ಬದಿಯಲ್ಲಿ 1,111 ಯೋಗ ಪಟುಗಳಿಂದ ಯೋಗ

12:12 PM Jun 22, 2017 | Team Udayavani |

ಮಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ- 2017ರ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ವತಿಯಿಂದ 6 ವಲಯಗಳ ನೇತೃತ್ವ ದಲ್ಲಿ ಮಂಗಳೂರು ಜ್ಯೋತಿ ವೃತ್ತ (ಅಂಬೇಡ್ಕರ್‌ ವೃತ್ತ)ದಿಂದ ಆರ್‌ಟಿಒ ವರೆಗೆ ರಸ್ತೆಯ ಒಂದು ಬದಿಯಲ್ಲಿ ಸುಮಾರು 1,111 ಯೋಗ ಪಟುಗಳು 5 ಪ್ರಕಾರಗಳ ಯೋಗ ನಡೆಸಿದರು.

Advertisement

ಸಂಜೆ 6.57ಕ್ಕೆ ಶಾಂತಿ ಮಂತ್ರ ದೊಂದಿಗೆ ಪ್ರಾರಂಭವಾದ ಯೋಗಾ ಸನ ನಮಸ್ಕಾರ ಸ್ಥಿತಿ, ತಾಡಾಸನ, ಉತ್ಕಟಾಸನ, ವೀರ ಭದ್ರಾಸನ, ಸಮಸ್ಥಿತಿ ತಾಡಾಸನದೊಂದಿಗೆ 7.02 ಗಂಟೆಗೆ (5 ನಿಮಿಷಗಳ ಕಾಲ) ಮುಕ್ತಾಯ ಗೊಂಡಿತು. ಯೋಗಪಟುಗಳಿಗೆ ಸೂಕ್ತ ನಿರ್ದೇಶನ ನೀಡಲು ಪ್ರತೀ 15 ಜನರೊಬ್ಬರಂತೆ ಬೋಧಕರನ್ನು ನೇಮಿಸಲಾಗಿತ್ತು. ಪೂರ್ವ, ಪಶ್ಚಿಮ, ದಕ್ಷಿಣ, ಗ್ರಾಮಾಂತರ ಸೇರಿದಂತೆ ಕಿರಿಯರಿಂದ ಹಿಡಿದು ಹಿರಿಯರ ವರೆಗೆ 6 ವಲಯದ ಯೋಗಪಟು ಗಳು ಭಾಗವಹಿಸಿದ್ದರು. 

ಯೋಗದ ಬಗ್ಗೆ ಜನರಿಗೆ ಮಾಹಿತಿ ನೀಡುವುದರೊಂದಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ಕಾರ್ಯ ಕ್ರಮ ಆಯೋಜಿಲಾಗಿದೆ ಎಂದು ಮಂಗಳೂರು ವಲಯ ಸಂಚಾಲಕ ಅಶೋಕ್‌ ಕುಮಾರ್‌ ಹಾಗೂ ಜಿಲ್ಲಾ ಸಂಚಾಲಕ ಶಿವಾನಂದ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next