Advertisement

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

01:21 AM Apr 28, 2024 | Team Udayavani |

ಹೊಸದಿಲ್ಲಿ: ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಂತಾರಾಷ್ಟ್ರೀಯ ಯೋಗ ದಿನದ ಪೂರ್ವ ಕಾರ್ಯಕ್ರಮಗಳಿಗಾಗಿ ಚುನಾವಣ ಆಯೋಗದಿಂದ ಕೇಂದ್ರ ಸರಕಾರವು ಅನುಮತಿ ಪಡೆದುಕೊಂಡಿದೆ. ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಅನುಮತಿ ನೀಡಿರುವ ಆಯೋಗವು ಕೆಲವು ನಿರ್ದೇಶನಗಳನ್ನು ಪಾಲಿಸುವಂತೆಯೂ ಸೂಚಿಸಿದೆ. ಕಾರ್ಯಕ್ರಮದ ವೇಳೆ ಯಾವುದೇ ಸಚಿವರು ಅಥವಾ ರಾಜಕೀಯ ವ್ಯಕ್ತಿಗಳ ಭಾವಚಿತ್ರವನ್ನು ಪ್ರದರ್ಶಿಸಬಾರದು. ಯಾವುದೇ ರಾಜಕೀಯ ವ್ಯಕ್ತಿಗಳನ್ನು ಆಹ್ವಾನಿಸಬಾರದು ಎಂಬುದು ಸೇರಿ ಹಲವು ನಿರ್ಬಂಧಗಳನ್ನು ಆಯೋಗ ವಿಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next