ಚಿಕ್ಕಬಳ್ಳಾಪುರ: ಈವರೆಗೆ ಯಾರಾದರೂ ಯೋಗ ಮಾಡಿಲ್ಲ ಅಂದರೆ, ಅವರು ಜೀವನದಲ್ಲಿ ಏನೋ ಒಂದು ಮಹತ್ವವಾದದ್ದನ್ನುಕಳಕೊಂಡಿದ್ದಾರೆ ಅನ್ನುವುದು ನನ್ನ ಭಾವನೆ.ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾ ತುಂಬಾನೆ ಸಹಕಾರಿ ಎಂದು ಜಿಲ್ಲಾಧಿಕಾರಿಆರ್.ಲತಾ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂನಲ್ಲಿ 7ನೇ ವಿಶ್ವ ಯೋಗ ದಿನಾಚರಣೆಪ್ರಯುಕ್ತ 45 ನಿಮಿಷ ವಿವಿಧ ಯೋಗಾಸನನಡೆಸಿಕೊಟ್ಟು ಮಾತನಾಡಿದ ಅವರು,ಯೋಗ ಮಾಡಿದರೆ ರೋಗ ಬರುವುದಿಲ್ಲ,ಇದು ನನ್ನ ವೈಯುಕ್ತಿಕ ಅನುಭವ ಕೂಡ ಆಗಿದೆ.
ಸುಮಾರು5ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, ಯಾರೂ ಮಾಡುತ್ತಿಲ್ಲವೂ ಅವರು ತಮ್ಮ ಜೀವನದಲ್ಲಿ ಪ್ರತಿ ನಿತ್ಯಯೋಗಾಭ್ಯಾಸ ಅಳವಡಿಸಿಕೊಳ್ಳುವುದು ಉತ್ತಮ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.ಯೋಗದಿಂದ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಆರೋಗ್ಯಸದೃಢವಾಗಲಿದ್ದು,ಆರೋಗ್ಯವೂ ಸುಧಾರಣೆಆಗಲಿದೆ. ಅಲ್ಲದೆ, ನಮ್ಮ ದೇಹಕ್ಕೆ ವಿವಿಧ ಆರೋಗ್ಯಸಮಸ್ಯೆಗಳುಬರದಂತೆ ತಡೆಗಟ್ಟಲು ಯೋಗದ ಸರಿಯಾದ ಅಭ್ಯಾಸದಿಂದ ಮಾತ್ರಸಾಧ್ಯ ಎಂದು ಹೇಳಿದರು.
ಅಧಿಕ ರಕ್ತದೊತ್ತಡ, ಮಧುಮೇಹ,ಬೊಜ್ಜು, ಹಲವು ರೀತಿಯ ಉಸಿರಾಟದ ತೊಂದರೆಗಳು, ವಿವಿಧ ರೀತಿಯ ತಲೆನೋವು, ಜೀರ್ಣಾಂಗ ಸಂಬಂಧಿಸಮಸ್ಯೆಗಳುಜೊತೆಗೆನಿದ್ರಾಹೀನತೆ ಇತ್ಯಾದಿಗಳೆಲ್ಲ ಹೆಚ್ಚಿನಸಂದರ್ಭಗಳಲ್ಲಿ ಮನೋದೈಹಿಕ ರೋಗಗಳೇಆಗಿದ್ದು, ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸಲು ಮುಖ್ಯವಾಗಿ ಉಸಿರಾಟ ಪ್ರಧಾನವಾಗಿರುವ ಯೋಗಾಭ್ಯಾಸ ಕ್ರಮದಿಂದ ಮನಸ್ಸಿನ ನಿಯಂತ್ರಣ ಸಾಸುವುದರೊಂದಿಗೆ ರೋಗಗಳ ಮೂಲ ಕಾರಣಗಳನ್ನುನಿಯಂತ್ರಿಸಬಹುದಾಗಿದೆ.
ಅಲ್ಲದೆ, ಸದಾಲವಲವಿಕೆಯಿಂದ ಇರಲು ಹಾಗೂ ಏಕಾಗ್ರತೆಗೆ ಸಾಧಿಸಲು ಪೂರಕವಾಗಿದೆ ಎಂದರು.ಜಿಲ್ಲಾಧಿಕಾರಿಗಳು ನಡೆಸಿಕೊಟ್ಟಯೋಗಾಸನಗಳನ್ನು ಎನ್.ಐ.ಸಿ ಲಿಂಕ್‌ಮೂಲಕ ಜಿಲ್ಲೆಯ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಅನುಕರಿಸಿ ಯೋಗಾಭ್ಯಾಸ ಮಾಡಿ7ನೇ ವಿಶ್ವ ಯೋಗ ದಿನವನ್ನು ಆಚರಿಸಿದ್ದು ವಿಶೇಷವಾಗಿತ್ತು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಡೀಸಿ ಅಮರೇಶ್, ಡಿಎಚ್‌ಒಇಂದಿರಾ ಆರ್. ಕಬಾಡೆ, ಪೌರಾಯುಕ್ತಲೋಹಿತ್‌ಕುಮಾರ್,ಜಿಲ್ಲಾಆಯುಷ್ ಅಧಿಕಾರಿಡಾ.ತಬೀಬಾಬಾನು,ಜಿಲ್ಲಾಯೋಜನಾನಿರ್ದೇಶಕಿ ರೇಣುಕಾ, ಇತರೆ ಇಲಾಖೆಗಳಅಧಿಕಾರಿಗಳು ಕೇಂದ್ರ ಸರ್ಕಾರ ಸಿದ್ಧಪಡಿಸಿದಸಾಮಾನ್ಯ ಶಿಷ್ಟಾಚಾರ ಪದ್ಧತಿಯ ಯೋಗಕ್ರಮಗಳುಳ್ಳ ಆಸನಗಳನ್ನು ಸಾಮಾಜಿಕಅಂತರವನ್ನು ಕಾಯ್ದುಕೊಂಡು 45ನಿಮಿಷಗಳ ಕಾಲ ಯೋಗಾಸನವನ್ನು ಡೀಸಿಸುಲಲಿತವಾಗಿ ನಡೆಸಿಕೊಟ್ಟರು.