ಬೆಂಗಳೂರು: ಹಿಂದೆ ಭಾರತದಲ್ಲಿ ಶಾಪವೆಂದೇ ಪರಿಗಣಿತವಾಗಿದ್ದ ದತ್ತು ಸ್ವೀಕಾರ ಇಂದು ಜನರ ಮನಸ್ಥಿತಿಯೊಂದಿಗೆ ಬದಲಾಗುತ್ತಿದೆ. ಸಮಾಜ ಇದನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದೆ. ಈ ಗಂಭೀರ ವಿಷಯದ ಕುರಿತು “ಯೋಚನೆ ಯಾಕೆ, ಚೇಂಜ್ ಓಕೆ” ಕಾರ್ಯಕ್ರಮದಲ್ಲಿ ಆರ್ ಜೆ ಶ್ರುತಿ ಅವರೊಂದಿಗೆ ಮಾತನಾಡಿದ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ, “ದೇಶದ ಯಾವುದೇ ಭಾಗದಲ್ಲಿ ವಾಸಿಸುವ ವ್ಯಕ್ತಿಯು ಎಲ್ಲಿಂದಲಾದರೂ ಮಗುವನ್ನು ದತ್ತು ಪಡೆದುಕೊಳ್ಳಬಹುದು. ದತ್ತು ತೆಗೆದುಕೊಳ್ಳುವಾಗ ಅಳವಡಿಸಿಕೊಳ್ಳಬೇಕಾದ ಹಲವಾರು ವಿಧಾನಗಳು ಇವೆ, ಅವುಗಳನ್ನು ಅನುಸರಿಸುವುದು ಬಹಳ ಮುಖ್ಯ.
ಈ ಪ್ರಕ್ರಿಯೆ ಈಗ ಆನ್ ಲೈನ್ ನಲ್ಲೇ ನಡೆಸಲ್ಪಡುವುದರಿಂದ ಈ ಕೆಲಸ ಮತ್ತಷ್ಟು ಸುಲಭವಾಗಿದೆ. ಯಾವುದೇ ಕಾನೂನಿನ ದಾಖಲಾತಿಯಿಲ್ಲದೆ ಮಗುವನ್ನು ದತ್ತು ಪಡೆಯುವುದು ಕಾನೂನಿನ ದೃಷ್ಟಿಯಲ್ಲಿ ಕ್ರಿಮಿನಲ್ ಎಂದು ಪರಿಗಣಿಸಲ್ಪಡುತ್ತದೆ ಮತ್ತು ಇದು ಅನಿರೀಕ್ಷಿತ ದುಷ್ಪರಿಣಾಮಗಳಿಗೆ ಕಾರಣವಾಗಬಹುದು. ಹೀಗಾಗಿ, ಎಲ್ಲಾ ಕಾನೂನು ಪ್ರಕ್ರಿಯೆಗಳ ಪ್ರಕಾರ ಮಗುವನ್ನು ದತ್ತು ಪಡೆದುಕೊಳ್ಳಲು ನಾವು ಶಿಫಾರಸು ಮಾಡುತ್ತೇವೆ”ಎಂದರು.
“ಪೀಪಲ್ ಫಸ್ಟ್” ನ ತತ್ವದೊಂದಿಗೆ ಪ್ರಸಾರಗೊಳ್ಳುತ್ತಿರುವ ಆರ್.ಜೆ.ಶ್ರುತಿ ಅವರ, “ಯೋಚನೆ ಯಾಕೆ, ಚೇಂಜ್ ಒಕೆ” ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಸಾಮಾಜಿಕ ವಿಷಯಗಳನ್ನು ಮುಂಚೂಣಿಗೆ ತರುತ್ತಿದ್ದಾರೆ. ರಾಷ್ಟ್ರದ ಜನ ತಮ್ಮನ್ನು ತಾವು ತೆರೆದುಕೊಳ್ಳಲು ಸಾಧ್ಯವಾಗುವಂಥ ಸಾಮಾಜಿಕ ಸವಾಲುಗಳು ಮತ್ತು ಪ್ರಚಲಿತ ಸಮಸ್ಯೆಗಳ ಬಗ್ಗೆ ಸಕಾರಾತ್ಮಕ ಮಾತುಕತೆ ನಡೆಸಿ ಅದರಲ್ಲಿ ಜನಸಾಮಾನ್ಯರು ಪಾಲ್ಗೊಳ್ಳುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶ.
ಪಟ್ ಪಟ್ ಪಟಾಕಿ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರಿನ ಖ್ಯಾತ ಆರ್.ಜೆ. ಶೃತಿ ಈ ಕಾರ್ಯಕ್ರಮದಲ್ಲಿ ಕೇಳುಗರಿಗೆ ಸ್ಫೂರ್ತಿ ನೀಡುವ ಸಂಭಾಷಣೆ ನಡೆಸುತ್ತಾರೆ. ಮುಂಬರುವ ಕಂತಿನಲ್ಲಿ ಆರ್ ಜೆ ಚರ್ಚಿಸಿದ ಅಂತಹ ಒಂದು ವಿಷಯವೆಂದರೆ ಮಕ್ಕಳ ದತ್ತು ಗೆದುಕೊಳ್ಳುವಿಕೆಯಾಗಿದೆ. ಈ ಚರ್ಚೆಯಲ್ಲಿ ನಮ್ಮೊಂದಿಗೆ ಅತಿಥಿಯಾಗಿ ನಟಿ ರಾಜಕಾರಣಿಯಾದ ಉಮಾಶ್ರೀ ಪಾಲ್ಗೊಂಡಿದ್ದರು.
ಪಟ್ ಪಟ್ ಪಟಾಕಿ ಶ್ರುತಿ ಅವರೊಂದಿಗಿನ ಈ ಆಕರ್ಷಣೀಯ ಸಂಭಾಷಣೆಯನ್ನು ಕೇಳಲು ಹಾಗೂ ದತ್ತು ತೆಗೆದುಕೊಳ್ಳುವಿಕೆಯ ವಿವಿಧ ಹಂತಗಳ ಬಗ್ಗೆ ಉಮಾಶ್ರೀ ಅವರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಈ ಶುಕ್ರವಾರ ಹಾಗೂ ಶನಿವಾರ 92.7 ಬಿಗ್ ಎಫ್ಎಂನ ‘ಆರ್ ಜೆ ಶೃತಿ’ ಕಾರ್ಯಕ್ರಮಕ್ಕೆ ಟ್ಯೂನ್ ಮಾಡಿ.
ಮುತ್ತೂಟ್ ಬ್ಲೂ ಯೋಚ್ನೆ ಯಾಕೆ ಚೇಂಜ್ ಓಕೆ ಕಾರ್ಯಕ್ರಮವನ್ನು ಮುತ್ತೂಟ್ ಫಿನ್ ಕಾರ್ಪ್ ಆಯೋಜಿಸಿದ್ದು, ಆರ್ ಜೆ ಶ್ರುತಿ ಸಾಮಾಜಿಕ ವಿಷಯಗಳು ಮುಂಚೂಣಿಗೆ ತಂದು ಚರ್ಚಿಸುತ್ತಾರೆ. ಇದು ಬಿಗ್ ಎಫ್ಎಂ ಹೊಸ ಕಾರ್ಯಕ್ರಮವಾಗಿದ್ದು ಪ್ರತಿದಿನ ಬೆಳಿಗ್ಗೆ 10 ರಿಂದ 11 ಗಂಟೆಗೆ ಪ್ರಸಾರವಾಗುತ್ತದೆ ಹಾಗೂ ಪ್ರತಿ ವಾರ ಎರಡು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ.