Advertisement
ಕರಾವಳಿಯ ಎಲ್ಲೆಡೆ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 7 ಸೆಂ.ಮೀ. ಮಳೆಯಾಗಿದ್ದು, ಇದು ರಾಜ್ಯದ ಗರಿಷ್ಠವಾಗಿತ್ತು.
ಉಡುಪಿ 6, ಕೋಟ, ಕಾರ್ಕಳ, ಆಗುಂಬೆ ತಲಾ 5, ಪಣಂಬೂರು, ಸುಬ್ರಹ್ಮಣ್ಯ, ಕೊಲ್ಲೂರು, ಕುಂದಾಪುರ, ಸಿದ್ದಾಪುರ, ಶಿರಾಲಿ, ಹೊನ್ನಾವರ ತಲಾ 4, ಮೂಡುಬಿದಿರೆ, ಮೂಲ್ಕಿ, ಬಜಪೆ, ಬೆಳ್ತಂಗಡಿ, ಮಾಣಿ, ಪುತ್ತೂರು, ಕಾರವಾರ, ಶಿಕಾರಿಪುರ ತಲಾ 3, ಮಂಗಳೂರು, ಸುಳ್ಯ, ಭಟ್ಕಳ, ಗೋಕರ್ಣ, ಕುಮಟಾ, ಅಂಕೋಲಾ, ಭಾಗಮಂಡಲ, ತೀರ್ಥಹಳ್ಳಿ, ಶೃಂಗೇರಿ ತಲಾ 2, ಧರ್ಮಸ್ಥಳ, ಉಪ್ಪಿನಂಗಡಿ, ಮೂರ್ನಾಡು, ಲಿಂಗನಮಕ್ಕಿ, ಸಾಗರ, ಅರಸಾಳು, ಹುಂಚದಕಟ್ಟೆ, ಕಳಸ, ಜಯಪುರ, ಕಮ್ಮರಡಿ, ಕೊಪ್ಪ ತಲಾ 1. ಗುರುವಾರ ಮುಂಜಾನೆಯವರೆಗಿನ 48 ತಾಸುಗಳ ಅವಧಿಯಲ್ಲಿ ರಾಜ್ಯದ ಎಲ್ಲೆಡೆ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
Related Articles
Advertisement