Advertisement

ಸಂಬಳ ಬಾಕಿ ಸೇರಿದಂತೆ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಯಡಿಯೂರಪ್ಪ ಭರವಸೆ

03:03 PM May 16, 2020 | keerthan |

ಬೆಂಗಳೂರು: ರಾಜ್ಯದ ಶಿಕ್ಷಕರ ಸಂಬಳ ಬಾಕಿ ಮುಂತಾದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.

Advertisement

ಇಂದು ರಾಜ್ಯದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳ ಜೊತೆ ಚರ್ಚೆ ನಡೆಸಿದರು.

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಕೂಡಲೇ ಬಾಕಿ ಉಳಿಸಿಕೊಂಡಿರೋ ಅರ್ ಟಿ ಐ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಅನುದಾನ ರಹಿತ ಶಿಕ್ಷಕರಿಗೆ ಕೋವಿಡ್ ನಿಂದ ಸಂಬಳ ಆಗದೆ ಇರುವುದರಿಂದ ಅವರಿಗೆ ಸಹ ವಿಶೇಷ ಪ್ಯಾಕೇಜ್ ನೀಡಬೇಕು, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿ ರಹಿತ ಸಾಲವನ್ನು ನೀಡಬೇಕು ಮತ್ತು ಬಡ ಶಿಕ್ಷಕರಿಗೆ ಆಹಾರ ಕಿಟ್ ನೀಡಬೇಕು ಎಂದು ಸಿಎಂ ಬಿಎಸ್ ವೈ ಗೆ ಮನವಿ ಮಾಡಿದ್ದಾರೆ.

ಪುಟ್ಟಣ್ಣ ನೇತೃತ್ವದ ಸಮಿತಿಯ ಮನವಿಗಳಿಗೆ ಸ್ಪಂದಿಸಿದ ಸಿಎಂ, ಆರ್ ಟಿ ಐ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ. ಎಲ್ಲಾ‌ ಶಾಲಾ ಕಾಲೇಜುಗಳಿಗು ಸಂಬಳ ಬಿಡುಗಡೆ ಮಾಡಲು ಸೂಚನೆ ನೀಡಲಾಗುವುದು. ಬಡ ಶಿಕ್ಷಕರಿಗೆ ಕಿಟ್ ಕೊಡಲು ಕೂಡಲೇ‌ ನಿರ್ದೇಶನ ನೀಡಲಾಗುವುದು, ಉಳಿದ ಬೇಡಿಕೆಗಳನ್ನು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next