ಬೆಂಗಳೂರು : ನಾನು ಮುಖ್ಯಮಂತ್ರಿ ಮಗ ಆಗಿದ್ರೆ ನಾನು ಹಾಗೆ ಹೇಳ್ತಿದೆ, ರಾಜಕಾರಣದಲ್ಲಿ ಎಲ್ಲವೂ ನಡೆಯುತ್ತದೆ, ಅವರ ಮಗ ಆಗಿರೋದ್ರಿಂದ ಅವರು ಹೇಳ್ತಾರೆ, ರಾಜಕಾರಣದಲ್ಲಿ ಏನೆಲ್ಲಾ ನಡೆಯಲ್ಲ ಎಂದು 2 ವರ್ಷ ಸಿಎಂ ಮುಗಿದ ಅಧ್ಯಾಯ ಎಂಬ ವಿಜಯೇಂದ್ರ ಹೇಳಿಕೆ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಕಿಕ್ ಬ್ಯಾಕ್ ಆರೋಪ ವಿಚಾರವಾಗಿ ಮಾತನಾಡಿದ ಯತ್ನಾಳ್, ಹಾಲಿ ಸಿಎಂ ಜೈಲಿಗೆ ಹೋದ ಉದಾಹರಣೆಗಳಿವೆ, ಹಿಂದಿನ ಇತಿಹಾಸ ತೆಗೆಯಿರಿ, ರಾಜಾಹುಲಿ ಅಂತ ಹೊಗಳಬೇಡಿ, ಯಾರ್ಯಾರು ಜೈಲಿಗೆ ಹೋಗಿದ್ರು ಲೀಸ್ಟ್ ತೆಗೆಯಿರಿ, ನಮ್ಮ ಪ್ರಧಾನಿಗಳಿಂದ ಭವಿಷ್ಯದ ಭಾರತ ನಿರ್ಮಾಣವಾಗ್ತಿದೆ ಎಂದರು.
ಭ್ರಷ್ಟಾಚಾರಕ್ಕೆ ನಮ್ಮ ಪಕ್ಷ ಯಾವತ್ತು ಬಿಡಲ್ಲ, ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು, ಕೌರವರ ನಾಶ ಹೇಗಾಯ್ತು, ದುಷ್ಟರಿಗೆ ಏನು ಶಿಕ್ಷೆಯಾಗುತ್ತದೆ ಗೊತ್ತಾಗುತ್ತದೆ ಎಂದರು.
ಸಿ.ಪಿ.ಯೋಗೇಶ್ವರ್ ಭೇಟಿ ವಿಚಾರವಾಗಿ ಮಾತನಾಡಿದ ಅವರು, ನಾನು ಯೋಗೇಶ್ವರ್ ಭೇಟಿ ಯಾಗಿದ್ದೆ. ಇಂದು ತ್ರಿಸ್ಟಾರ್ ಹೊಟೇಲ್ ಕಾರ್ಯಕ್ರಮದಲ್ಲಿ ಭೇಟಿ ಮಾಡುತ್ತೇವೆ. ಪ್ರವಾಸೋದ್ಯಮ ಇಲಾಖೆ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೇವೆ. ಅದನ್ನ ಬಿಟ್ಟು ರಾಜಕಾರಣ ಬಗ್ಗೆ ಮಾತನಾಡಿಲ್ಲ. ಅವನು ದೆಹಲಿಗೆ ಏನೇನು ಬರ್ದಿದ್ದಾನೆ ಗೊತ್ತಿಲ್ಲ. ಪೇಪರ್ ನಲ್ಲಿಬರೆದಿದ್ದಾನೋ, ರೌಂಡ್ ನಲ್ಲಿರುವುದರಲ್ಲಿ ಬರೆದಿದ್ದಾನೋ ಗೊತ್ತಿಲ್ಲ ಎಂದರು.
ಪಂಚಮಸಾಲಿ ಮೀಸಲಾತಿ ಹೋರಾಟ ನಿಂತಿಲ್ಲ. ಆ ಹೋರಾಟದಲ್ಲಿ ಒಬ್ಬ ರಾಜಕಾರಣಿ ನಗ್ನನಾಗಿದ್ದಾನೆ. ಅವನು ತನ್ನ ಉದ್ಧಾರಕ್ಕೆ ಸಮಾಜಕ್ಕೆ ಬಳಸಿಕೊಂಡಿದ್ದಾನೆ. ಇದರ ಹಿಂದೆ ಒಬ್ಬ ಉದ್ಯಮಿ ಮಂತ್ರಿ ಇದ್ದಾನೆ. ಅವನನ್ನ ಹೋಗಿ ಕೇಳಿ ಹೇಳ್ತಾನೆ
ಏನಾಯ್ತು ಹೇಗಾಯ್ತು ಅನ್ನೋದನ್ನ ಎಂದು ಪರೋಕ್ಷವಾಗಿ ನಿರಾಣಿ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.