Advertisement
ಸಹಕಾರಿ ಸಂಘಗಳ ಮೂಲಕ ನೋಂದಣಿ ಯಾದರೂ ಸಿಗುತ್ತಿಲ್ಲ ಕಾರ್ಡ್ ಎನ್ನುವುದು ದೂರು. ರಾಜ್ಯ ಸರಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರುಜಾರಿಗೊಳಿಸಿದೆ. ಆದರೆ, ವಿಮಾ ಯೋಜನೆಗಾಗಿ ಸಲ್ಲಿಸಲಾಗಿರುವ ಅರ್ಜಿದಾರರಿಗೆ ಕಾರ್ಡ್‌ಗಳನ್ನು ನೀಡುವ ವ್ಯವಸ್ಥೆ ಕೇಂದ್ರೀಕೃತವಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಅರ್ಜಿಗಳ ಕಾರ್ಡ್‌ಗಳು ಬೆಂಗಳೂರಿನಲ್ಲಿ ಮಾತ್ರವೇ ಮುದ್ರಣವಾಗಿ ಆಯಾ ಜಿಲ್ಲೆಗಳಿಗೆ ವಿತರಣೆಯಾಗುವ ವ್ಯವಸ್ಥೆಯಿತ್ತು. ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಕಾರ್ಡ್ ವಿತರಣೆ ವಿಳಂಬವಾಗುತ್ತಿರುವುದು ಜನರಲ್ಲಿ ಬೇಸರ ಮೂಡಿಸಿತ್ತು. ಈಗ ಆಯಾ ಜಿಲ್ಲೆಗಳಲ್ಲೇ ಮುದ್ರಿಸಿ ನೀಡುವಂತೆ ಸಹಕಾರ ಇಲಾಖೆ ಸೂಚಿಸಿದಂತೆ ಸಂಬಂಧಪಟ್ಟ ಏಜೆನ್ಸಿ ಕಾರ್ಡ್‌ಗಳನ್ನು ನೀಡುತ್ತಿದೆ. ಜನವರಿಯಲ್ಲಿ ನೋಂದಣಿ ಆಗಿದ್ದರೂ ಜೂನ್ ಅಂತ್ಯದವರೆಗೂ ವಿತರಣೆಯೇ ಮುಗಿದಿಲ್ಲ.
Related Articles
ಇಲ್ಲದೇ ಚಿಕಿತ್ಸೆ
ತೀರಾ ಅಗತ್ಯವಿದ್ದವರಿಗೆ ಕಾರ್ಡ್ ಬೇಗ ತರಿಸಿಕೊಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಕಾರ್ಡ್ ನೀಡುವುದು ಕಷ್ಟಕರವಾಗಿದೆ. ಕಾರ್ಡ್ ಇಲ್ಲದವರಿಗೆ ಸಹಕಾರಿ ಸಂಸ್ಥೆಗಳು ಪತ್ರ ನೀಡಿ ಅದಕ್ಕೆ ಆಸ್ಪತ್ರೆಗಳು ಮಾನ್ಯತೆ ನೀಡಿದರೆ ಯಶಸ್ವಿನಿ ಮೂಲಕ ಚಿಕಿತ್ಸೆ ದೊರೆಯುತ್ತದೆ. ಒಂದೊಮ್ಮೆ ಆಸ್ಪತ್ರೆಗಳು ಒಪ್ಪದೇ ಇದ್ದರೆ ಏನೂ ಮಾಡುವಂತಿಲ್ಲ ಎಂದಾಗಿದೆ. ವಿತರಿಸಿದ ಕೆಲವು ಕಾರ್ಡ್‌ಗಳಲ್ಲಿ ದೋಷಗಳು ಇದ್ದಾಗ ಆಸ್ಪತ್ರೆಗಳಲ್ಲಿ ಅವುಗಳನ್ನು ಸ್ವೀಕರಿಸುವುದಿಲ್ಲ. ಅದನ್ನು ಸರಿಪಡಿಸಿಕೊಂಡು ಚಿಕಿತ್ಸೆ ಪಡೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
Advertisement
ಚಿಕಿತ್ಸೆಯಶಸ್ವಿನಿ ಯೋಜನೆಯಡಿ ನಾನಾ ಶಸ್ತ್ರಚಿಕಿತ್ಸೆಗಳು ಸೇರಿದಂತೆ 1,650 ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ. ಅದಕ್ಕಾಗಿ ರಾಜ್ಯಾದ್ಯಂತ ಹಲವು ಆಸ್ಪತ್ರೆಗಳನ್ನು ಯೋಜನೆಯೊಂದಿಗೆ ಸೇರಿಸಿಕೊಳ್ಳಲಾಗಿದೆ. ಈಗಾಗಲೇ ಕಾರ್ಡ್ ಪಡೆದಿ ರುವವರು ಜನವರಿಯಿಂದಲೇ ಈ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯಲು ಆರಂಭಿಸಿದ್ದಾರೆ. ನಾಲ್ಕು ಜನರ ಕುಟುಂಬಕ್ಕೆ ಗ್ರಾಮೀಣ ಭಾಗಕ್ಕಾದರೆ 500 ರೂ. ನಗರ ಪ್ರದೇಶದ ಕುಟುಂಬಕ್ಕೆ 1,000 ನಿಗದಿಪಡಿಸಲಾಗಿದೆ. ಕುಟುಂಬದ ಸಂಖ್ಯೆ ಹೆಚ್ಚಾಗಿದ್ದಲ್ಲಿ ತಲಾ ಒಬ್ಬರಿಗೆ 200 ರೂ. ಹೆಚ್ಚುವರಿಯಾಗಲಿದೆ. ಎಸ್ಸಿ, ಎಸ್ಟಿ ವರ್ಗಗಳಿಗೆ ಯಾವುದೇ ಶುಲ್ಕವಿಲ್ಲ. ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬ 5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು. ನಿರಾಕರಣೆ
ದ.ಕ., ಉಡುಪಿ ಜಿಲ್ಲೆಯಲ್ಲಿ ಅಳಿಯಕಟ್ಟು ಸಂಪ್ರದಾಯ ಇದೆ. ಯಶಸ್ವಿನಿ ನಿಯಮದನ್ವಯ ಅತ್ತೆ ಮನೆಯಲ್ಲಿ ಇರುವ ಅಳಿಯನಿಗೆ ಈ ಸೌಲಭ್ಯ ಲಭ್ಯವಿಲ್ಲ. ಅಕ್ಕನ ಮನೆಯಲ್ಲಿ ವಾಸಿಸುವ ತಮ್ಮನಿಗೆ ಚಿಕಿತ್ಸೆ ಇಲ್ಲ. ಇದರಿಂದಾಗಿ ನೋಂದಣಿ ಮಾಡಿದರೂ ಫಲ ಇಲ್ಲ ಎಂದಾಗಿದೆ. ಎಲ್ಲೆಲ್ಲಿ?
ಈ ಯೋಜನೆಯನ್ವಯ ಕೋಟೇಶ್ವರದ ಡಾ| ಎನ್.ಆರ್.ಆಚಾರ್ಯ ಮೆಮೋರಿಯಲ್ ಹಾಸ್ಪಿಟಲ್, ಕುಂದಾಪುರದ ಆದರ್ಶ ಆಸ್ಪತ್ರೆ, ವಿವೇಕ ಆಸ್ಪತ್ರೆ, ಶಿರೂರಿನ ಪಾರ್ವತಿ ಮಹಾಬಲ ಶೆಟ್ಟಿ ಮೆಮೋರಿಯಲ್ ಕಣ್ಣಿನ ಆಸ್ಪತ್ರೆ, ಕಾರ್ಕಳದ ಸ್ಪಂದನ ಆಸ್ಪತ್ರೆ, ನಿಟ್ಟೆಯ ಗಜಾರಿಯಾ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಸೇವೆ ಸಿಗುತ್ತಿದೆ. ಕುಂದಾಪುರ ತಾಲೂಕಿನಲ್ಲಿ 1,80,634 ಜನ, ಕಾರ್ಕಳ ತಾಲೂಕಿನಲ್ಲಿ 28,625 ನೋಂದಾಯಿಸಿದ್ದು ಉಡುಪಿ ಜಿಲ್ಲೆಯಲ್ಲಿ ಒಟ್ಟು 3,58,624 ಜನ ನೋಂದಾಯಿಸಿದ್ದಾರೆ. ಮೈಸೂರು ವಿಭಾಗದ 7 ಜಿಲ್ಲೆಗಳಲ್ಲಿ ಉಡುಪಿಯಲ್ಲಿ ಅತಿಹೆಚ್ಚು ನೋಂದಣಿಯಾಗಿದೆ. ನೆಟ್‌ವರ್ಕ್ ಆಸ್ಪತ್ರೆಗಳಿಗೆ ನೀಡುವ ಪ್ಯಾಕೇಜ್ ದರ ಕಡಿಮೆಯಾದ ಕಾರಣ ಆಸ್ಪತ್ರೆಗಳು ಈ ಯೋಜನೆಯಡಿ ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ವಿತರಿಸಲಾಗುತ್ತಿದೆ
ಕಾರ್ಡ್ ಬೆಂಗಳೂರಿನಿಂದ ಬರುವುದು ತಡವಾಗುತ್ತದೆ ಎಂದು ಏಜೆನ್ಸಿಯವರು ಜಿಲ್ಲಾ ಕೇಂದ್ರದಲ್ಲೇ ಆಯಾ ಸಹಕಾರ ಸಂಘಗಳ ಕೇಂದ್ರ ಕಚೇರಿಯಲ್ಲೇ ಮುದ್ರಿಸಿ ಕೊಡುತ್ತಿದ್ದಾರೆ. ಬಹುತೇಕ ಎಲ್ಲ ಕಡೆಗೆ ಈಗಾಗಲೇ ಕಾರ್ಡ್ ನೀಡಲಾಗಿದೆ. ದೊರೆಯದವರು ಆಯಾ ಸಹಕಾರಿ ಸಂಸ್ಥೆಗಳ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು.
-ಅರುಣ್ ಕುಮಾರ್, ಸಹಕಾರಿ ಸಂಘಗಳ ಸಹಾಯಕ ನಿಬಂಧಕ, ಕುಂದಾಪುರ ದೊರೆತಿಲ್ಲ
ಜನವರಿಯಲ್ಲಿ ನೋಂದಣಿ ಮಾಡಿಸಿದ್ದು ಆರು ತಿಂಗಳಾದರೂ ಕಾರ್ಡ್ ದೊರೆಯಲಿಲ್ಲ.
-ರಾಘವೇಂದ್ರ ಶೇಟ್, ಕುಂದಾಪುರ