Advertisement

ಕೊನೆಗೂ ಗಡ್ಡಕ್ಕೆ ಕತ್ತರಿ!;ಹೇಗಾಗಿದ್ದಾರೆ ನೋಡಿ ರಾಕಿಂಗ್‌ ಸ್ಟಾರ್‌

01:28 PM Aug 25, 2018 | |

ಬೆಂಗಳೂರು : ಕಳೆದ 2 ವರ್ಷಗಳಿಂದ ಉದ್ದನೆಯ ಗಡ್ಡಧಾರಿಯಾಗಿ ರಗೆಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಯಶ್‌ ಅವರು ಕೊನೆಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. 

Advertisement

ರಾಕಿಂಗ್‌ಸ್ಟಾರ್‌ ಅವರು ಮತ್ತೆ ಹಳೆ ಲುಕ್‌ನಲ್ಲಿ ಮಿಂಚುತ್ತಿದ್ದು,ಹೊಸಮುಖವಾಗಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಿದ್ದಾರೆ. 

ಪತ್ನಿ ರಾಧಿಕಾ ಪಂಡಿತ್‌ ಅವರು ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತ ಪಡಿಸಿದ್ದಾರೆ. ನನಗಂತೂ ನನ್ನ ಗಂಡ ಹೇಗೆ ಕಾಣಿಸುತ್ತಿದ್ದರು ಎನ್ನುವುದು ಗೊತ್ತಿಲ್ಲ. ಕೊನೆಗೂ ಗಡ್ಡಕ್ಕೆ, ಉದ್ದ ಕೂದಲಿಗೆ ಮುಕ್ತಿ ಸಿಕ್ಕಿದೆ ಎಂದಿದ್ದಾರೆ. 

Advertisement

ಮೈ ನೇಮ್‌ ಈಸ್‌  ಕಿರಾತಕ ಚಿತ್ರ ತಂಡ ಮತ್ತು ಪತ್ನಿಯ ಸಮ್ಮುಖದಲ್ಲೆ ಯಶ್‌ ಕೈಯಾರೆ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿಕೊಂಡಿದ್ದಾರೆ. ಮತ್ತೆ ಹೊಸ ಲುಕ್‌ಗೆ ಮರಳಿದ್ದಾರೆ. 

ಬಿಗ್‌ ಬಜೆಟ್‌ ಕೆಜಿಎಫ್ ಚಿತ್ರಕ್ಕಾಗಿ ಯಶ್‌ ಗಡ್ಡಧಾರಿಯಾಗಿದ್ದರು. ಯಾವಾಗ ಗಡ್ಡ ಕತ್ತರಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಾಗಿದ್ದರು.  ಡಿಸೆಂಬರ್‌ನಲ್ಲಿ  ರಾಧಿಕಾ ತಾಯಿಯಾಗಲಿದ್ದು, ಅಪ್ಪನಾದ ಬಳಿಕವೇ ಯಶ್‌ ಗಡ್ಡಕ್ಕೆ ಕತ್ತರಿ ಹಾಕುತ್ತಾರೆ ಎಂದು ಹಲವು ಅಭಿಮಾನಿಗಳು ಊಹಿಸಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next