Advertisement

Varanasi: ಕಾಲ ಭೈರವ ದೇವಾಲಯದ ಗರ್ಭಗುಡಿಯಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಮಹಿಳೆ

06:35 PM Dec 01, 2024 | Team Udayavani |

ರೀಲ್ಸ್ ಹುಚ್ಚು ಎಷ್ಟರ ಮಟ್ಟಿಗೆ ಜನರ ಮೇಲೆ ಪರಿಣಾಮ ಬೀರಿದೆ ಎಂದರೆ ಯಾವ ಸ್ಥಳದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ಸಾಮಾನ್ಯ ಜ್ಞಾನವೂ ಜನರಲ್ಲಿ ಇಲ್ಲದಂತಾಗಿದೆ ಎಂಬಂತಾಗಿದೆ, ಎಲ್ಲಿ ಹೋದರೂ ಒಂದು ಸೆಲ್ಫಿ ಅಥವಾ ರೀಲ್ಸ್ ಇಷ್ಟು ಬಿಟ್ಟರೆ ಜೀವನದಲ್ಲಿ ಬೇರೇನೂ ಬೇಡ ಅನ್ನುವಂತಾಗಿದೆ.

Advertisement

ರೀಲ್ಸ್ ಹುಚ್ಚಾಟದಿಂದ ಕೆಲವೊಂದು ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆಗೂ ಧಕ್ಕೆ ತರುವಂತಾಗಿದೆ ಅದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿರುವ ವಿಡಿಯೋ… ಯಾಕೆಂದರೆ ಈ ಮೊದಲು ಹುಟ್ಟು ಹಬ್ಬವನ್ನು ಮನೆ, ಹೋಟೆಲ್, ಅಥವಾ ರೆಸಾರ್ಟ್ ಗಳಲ್ಲಿ ಮಾಡುತ್ತಾರೆ ಆದರೆ ಇಲ್ಲಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಹುಟ್ಟು ಹಬ್ಬದವನ್ನು ವಾರಣಾಸಿಯ ಪ್ರಸಿದ್ಧ ದೇವಾಲಯವಾದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಆಚರಿಸಿಕೊಂಡಿರುವುದು ಅಷ್ಟು ಮಾತ್ರ ಆದರೆ ತೊಂದರೆ ಇರಲಿಲ್ಲ ಮಹಿಳೆ ದೇವರ ದರ್ಶನ ಪಡೆದು ಗರ್ಭಗುಡಿಯಲ್ಲೇ ಅರ್ಚಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ದೇವರಿಗೆ ಸಮರ್ಪಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಅಲ್ಲದೆ ಮಹಿಳೆ ಹಾಗೂ ದೇವಳದ ಅರ್ಚಕರ ವಿರುದ್ಧ ನೆಟ್ಟಿಗರು ಕೆರಳುವಂತೆ ಮಾಡಿದೆ.

ಇದುವರೆಗೆ ಎಲ್ಲೂ ಯಾರೂ ದೇವಸ್ಥಾನದ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ ವಿವರವೇ ಇಲ್ಲ ಇದು ಅಹಂಕಾರದ ಪರಮಾವಧಿ ಅಲ್ಲದೆ ದೇವಳದ ಅರ್ಚಕರೂ ಇದಕ್ಕೆ ಸಮ್ಮತಿ ನೀಡಿರುವುದು ವಿಷಾಧನೀಯ ಎಂದು ನೆಟ್ಟಿಗರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ವಿಡಿಯೋ ದಲ್ಲಿ ಕೇಕ್ ಕತ್ತರಿಸಿದ ಮಹಿಳೆ ಒಂದು ತುಂಡು ಕೇಕ್ ಅನ್ನು ದೇವರಿಗೆ ಸಮರ್ಪಿಸಿದ್ದೂ ಕಾಣಬಹುದು ಅಲ್ಲದೆ ದೇವಳದ ಅರ್ಚಕರೂ ಅಲ್ಲೇ ಇರುವುದು ಕಾಣಬಹುದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next