Advertisement
ಸೋಮವಾರ ಬೆಳಗ್ಗೆ ಅಂಧೇರಿ (ಪೂರ್ವ)ಯಲ್ಲಿರುವ ಮರೋಲ್ ಪೊಲೀಸ್ ಕ್ಯಾಂಪ್ನ ಹಿಂಭಾಗದ ಬಾಡಿಗೆ ನಿವಾಸದಲ್ಲಿ ಸೃಷ್ಟಿ ತುಲಿ ಶವವಾಗಿ ಪತ್ತೆಯಾಗಿದ್ದಾಳೆ. ತನ್ನ ಬಾಯ್ ಫ್ರೆಂಡ್ ಜೊತೆಗಿನ ಜಗಳದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.ಆಗಿದ್ದೇನು?:
ಪೊಲೀಸರ ಮಾಹಿತಿ ಪ್ರಕಾರ, ಆದಿತ್ಯ ಪಂಡಿತ್ ಮಾಂಸಾಹಾರ ಸೇವಿಸದಂತೆ ಸೃಷ್ಟಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಸಾಕಷ್ಟು ಚರ್ಚೆಯಾಗಿ ಆಕೆಯ ಅರ್ಧದಾರಿಯಲ್ಲೇ ಬಿಟ್ಟು ಆದಿತ್ಯ ಮನೆ ಕಡೆಗೆ ತೆರಳಿದ್ದಾನೆ. ಬಳಿಕ ಸೃಷ್ಟಿ ರವಿವಾರ ಸಂಜೆ ಕೆಲಸದ ಅವಧಿ ಮುಗಿಸಿ ವಾಪಸ್ ಬಂದ ಮೇಲೂ ಆಕೆಯ ಮನೆಯಲ್ಲಿ ಜಗಳವಾಡಿದ್ದಾರೆ. ಬಳಿಕ ಆದಿತ್ಯ ಸೋಮವಾರ ಬೆಳಗ್ಗೆ 1 ಗಂಟೆಗೆ ದಿಲ್ಲಿಗೆ ಮರಳಲು ಆಕೆಯ ಬಿಟ್ಟು ತೆರಳಿದ್ದಾನೆ. ಬಳಿಕ ಸೃಷ್ಟಿ ಆದಿತ್ಯನಿಗೆ ದೂರವಾಣಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ಆದಿತ್ಯ ಆ ಕೂಡಲೇ ಹೊರಟು ಆಕೆಯ ಮನೆಗೆ ಧಾವಿಸಿದ್ದಾಗ ಆಕೆಯ ಮನೆ ಬಾಗಿಲು ಬೀಗ ಹಾಕಿತ್ತು. ನಕಲಿ ಕೀ ಬಳಸಿ ಒಳ ಹೋಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಆಕೆ ಜೀವಂತವಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಆಕೆಯ ಕುಟುಂಬಸ್ಥರು ಮುಂಬೈ ಪೊಲೀಸರಿಗೆ ಒತ್ತಾಯಿಸಿದ್ದಾರೆ.