Advertisement

‘ಯಕ್ಷಗಾನ ಬೆಳವಣಿಗೆಗೆ ಕಲಾಭಿಮಾನಿಗಳ ಸಹಕಾರ ಅಗತ್ಯ’

02:52 PM Apr 18, 2018 | Team Udayavani |

ಸುರತ್ಕಲ್‌ : ಯಕ್ಷಗಾನ ಕಲೆ ಬೆಳೆಯಲು ಕಲಾಭಿಮಾನಗಳ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಯಕ್ಷಗಾನ ಕಲೆ ಬೆಳವಣಿಗೆಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದು ಉದ್ಯಮಿ ಅಗರಿ ರಾಘವೇಂದ್ರ ರಾವ್‌ ಹೇಳಿದರು.

Advertisement

ಬಂಟರ ಭವನದಲ್ಲಿ ಇತ್ತೀಚೆಗೆ ಯಕ್ಷಧ್ರುವ ಫೌಂಡೇಶನ್‌ ಟ್ರಸ್ಟ್‌ನ 29ನೇ ಸುರತ್ಕಲ್‌ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜೋತಿಷಿ ಕೆ.ಸಿ. ನಾಗೇಂದ್ರ ಭಾರಧ್ವಾಜ್‌ ಸುರತ್ಕಲ್‌ ಉದ್ಘಾಟಿಸಿ, ಯಕ್ಷಗಾನ ಕಲಾವಿದರ ಕಷ್ಟ ಪರಿಹಾರಕ್ಕೆ ಟ್ರಸ್ಟ್‌ ಕಾರ್ಯಕ್ರಮ ಆಯೋಜಿಸುತ್ತಿರುವುದು ಮಹತ್ವದ ಕ್ರಮ ಎಂದರು.

ವಿದೇಶದಲ್ಲಿ ಟ್ರಸ್ಟ್‌ ಆರಂಭ
ಟ್ರಸ್ಟ್‌ನ ಕೇಂದ್ರೀಯ ಸಮಿತಿ ಪ್ರ. ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್‌ ಮಾತನಾಡಿ, ಟ್ರಸ್ಟ್‌ ಕಾರ್ಯಗಳು ಜನಪ್ರಿಯಗೊಂಡಿವೆ. ವಿದೇಶದಲ್ಲಿ ಟ್ರಸ್ಟ್‌ ಆರಂಭಿಸಲು ನಿರ್ಧರಿಸಲಾಗಿದ್ದು, ಅಮೆರಿಕದಲ್ಲಿ ಸದ್ಯದಲ್ಲೇ ಟ್ರಸ್ಟ್‌ ಘಟಕವನ್ನು ಆರಂಭಿಸಲಾಗುವುದು ಎಂದರು.

ಘಟಕ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಮಧ್ಯ ಶ್ರೀ ಖಡ್ಗೇಶ್ವರ ದೇಗುಲದ
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಉದ್ಯಮಿ ಯಾದವ ಕೋಟ್ಯಾನ್‌, ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್‌ ಆರ್‌. ಶೆಟ್ಟಿ, ಪ್ರೇಮ್‌ ಶೆಟ್ಟಿ ಸುರತ್ಕಲ್‌, ಉಚ್ಚಿಲದ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ್‌ ಹೊಸಬೆಟ್ಟು, ಉದ್ಯಮಿಗಳಾದ ಧನ ಪಾಲ್‌ ಶೆಟ್ಟಿಗಾರ್‌, ರಮಾನಾಥ ಶೆಟ್ಟಿ ಕೃಷ್ಣಾಪುರ, ಸತೀಶ್‌ ಮುಂಚೂರು, ಡೋನ ಸುವಾರಿಸ್‌, ಟಿ.ಎನ್‌. ರಮೇಶ್‌, ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಕೇಂದ್ರೀಯ ಸಮಿತಿ ಕೋಶಾಧಿಕಾರಿ ಸಿ.ಎ. ಸುದೇಶ್‌ ಕುಮಾರ್‌ ರೈ, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್‌ ರೈ, ಲೀಲಾಧರ್‌ ಶೆಟ್ಟಿ ಕಟ್ಲ, ಸಂಚಾಲಕ ರವಿ ಶೆಟ್ಟಿ ಸುರತ್ಕಲ್‌, ಕೋಶಾಧಿಕಾರಿ ಸತೀಶ್‌ ಶೆಟ್ಟಿ ಬಾಳಿಕೆ, ಗಂಗಾಧರ ಪೂಜಾರಿ ಚೇಳಾಯಿರು ಮೊದಲಾದವರಿದ್ದರು.

ಶಾಸಕ ಮೊಯಿದಿನ್‌ ಬಾವಾ ಶುಭ ಹಾರೈಸಿದರು. ಘಟಕಾಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ನವೀನ್‌ಕುಮಾರ್‌ ಶೆಟ್ಟಿ ಎಡ್ಮೆಮಾರ್‌ ನಿರೂಪಿಸಿದರು. ಲೋಕಯ್ಯಶೆಟ್ಟಿ ಪರಿಚಯಿಸಿದರು. ಭಾಗವತ ಶಿವ ಎಲ್‌. ಸುವರ್ಣ ಹೊಸಬೆಟ್ಟು, ಚಕ್ರತಾಳ ವಾದಕ ಸುರೇಶ್‌ ಕಾಮತ್‌ ಅವರಿಗೆ 25 ಸಾವಿರ ರೂ. ನಗದಿನೊಂದಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

Advertisement

ಗೌರವ
ಯಕ್ಷಗಾನದ ಸಾಧನೆಗಾಗಿ ಅಗರಿ ರಘುರಾಮ ಭಾಗವತರು, ಅರುಣ್‌ ಪೈ ಸುರತ್ಕಲ್‌, ಶಿವರಾಮ್‌ ಪಣಂಬೂರು, ಪ್ರಕಾಶ್‌ ಎಂ. ಶೆಟ್ಟಿ ಸುರತ್ಕಲ್‌, ಮಾಧವ ಶೆಟ್ಟಿ ಬಾಳ, ಜನಾರ್ದನ್‌ ಡಿ. ಶೆಟ್ಟಿಗಾರ್‌ ಸುರತ್ಕಲ್‌, ರವಿ ಕುಮಾರ್‌ ಸುರತ್ಕಲ್‌, ಅಪೂರ್ವಾ ಸುರತ್ಕಲ್‌ ಇವರಿಗೆ ಗೌರವಾರ್ಪಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next