Advertisement

Yakshagana: ಯಕ್ಷಗಾನಂ ವಿಶ್ವಗಾನಂ

07:18 AM Mar 10, 2024 | Team Udayavani |

ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣಗಳನ್ನೋಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ ಯಕ್ಷಗಾನ. ಗಂಡು ಮೆಟ್ಟಿದ ಕಲೆಯು ಆಗಿದೆ. ಕರ್ನಾಟಕದ ಕರಾವಳಿ ಜಿಲ್ಲೆ, ಕಾಸರಗೋಡು ಜಿಲ್ಲೆಗಳಲ್ಲೂ ಯಕ್ಷಗಾನವು ಮನೆ ಮನೆ ಮಾತಾಗಿದೆ.

Advertisement

ಯಕ್ಷಗಾನ ಆರ್ಹಾಯದಲ್ಲಿ ಬಣ್ಣಗಳು, ವಸ್ತ್ರಗಳು,ಆಭರಣಗಳು ಇತ್ಯಾದಿ ಪ್ರಮುಖ ಪರಿಕರಗಳು. ಇವುಗಳನ್ನು ಒಂದಕ್ಕೊಂದು ಪೂರಕವಾಗುವಂತೆ ಜೋಡಿಸಿ, ನಿರ್ದಿಷ್ಟವಾದ ವೇಷವೊಂದನ್ನು ರೂಪಿಸಲಾಗುತ್ತದೆ. ಪರಂಪರಾಗತವಾಗಿ ಬಂದ ವಸ್ತು, ಪರಿಕರಗಳನ್ನೇ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಸೌಂದರ್ಯಾತ್ಮಕವಾಗಿ ರೂಪಿಸಲಾಗುತ್ತದೆ.

ಇಲ್ಲಿ ಬಳಸುವ ಒಂದೊಂದು ವಸ್ತು-ಪರಿಕರಗಳು ಸಮಕಾಲೀನ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಿಕೊಂಡವುಗಳಾಗಿವೆ ಎಂದು ಹೇಳಬಹುದು. ಇದು ಕಾಲಕ್ಕನುಸರಿಸಿದ ಆಧುನಿಕ ವಸ್ತುಗಳಿಂದ ಹಾಗೂ ವಿವಿಧ ರೀತಿಯ ಹೊಸ ತಂತ್ರಜ್ಞಾನಗಳ ಬದಲಾವಣೆಗಳ ಜತೆಗೆ ಪ್ರೇಕ್ಷಕರನ್ನು ಮತ್ತು ಹೆಚ್ಚಿನ ರೀತಿಯಲ್ಲಿ ಗಮನ ಸೆಳೆಯುವಂತೆ ಮಾಡುವಲ್ಲಿ ಕಲಾವಿದರಿಗೂ ಹಾಗೂ ಮೇಳದವರಿಗೂ ಹೊಸ ರೀತಿಯ ಕಥಾಭಾಗವನ್ನು ಹಾಗೂ ಆಟದಲ್ಲಿ ವೈವಿಧ್ಯತೆಯನ್ನು ತರುವುದು ಅನಿವಾರ್ಯವಾಗಿದೆ.

ಆಗಿನ ಕಾಲದಲ್ಲಿ ಗ್ಯಾಸ್‌ ಲೈಟರ್‌ ಅಥವಾ ದೊಂದಿ ಬೆಳಕಿನಲ್ಲಿ ಬಳಸುತ್ತಿದ್ದ ಬಣ್ಣಗಳು, ವೇಷಗಳು ಈಗಿನ ವಿದ್ಯುತ್‌ ಬೆಳಕಿನ ಸಂದರ್ಭದಲ್ಲಿ ಆಕರ್ಷಣೀಯವಾಗಿ ಕಾಣಿಸಲಾರವು ಎಂದು ಬಣ್ಣಗಳಲ್ಲಿ ಹಾಗೂ ವೇಷಗಳಲ್ಲಿ ಬದಲಾವಣೆ ಮಾಡಲಾಗಿದೆ.

ಕರಾವಳಿ ಮತ್ತು ಮಲೆನಾಡಿನ ಜನತೆಯ ಆಸ್ತಿಯೋಪಾದಿಯಲ್ಲಿ ಬೆಳೆದ ಹಾಗೂ ಈ ನೆಲದ ಸಾಂಸ್ಕೃತಿಕ ಸತ್ವಗಳನ್ನು ಗಂಭೀರವಾಗಿ ಹೀರಿಕೊಂಡು ಸುದೀರ್ಘ‌ವಾದ ಪರಂಪರೆಯ ಹಾಗೂ ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಬಂದಿದೆ.

Advertisement

ಇಂದಿನ ದೂರದರ್ಶನ, ಜಂಗಮ ವಾಣಿಯ ಭರಾಟೆಯಲ್ಲಿ ನಮ್ಮ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ಹಾಗೂ ತಾಳ ಮದ್ದಳೆಯ ಕಲಾಪ್ರಕಾರಗಳನ್ನು ಉಳಿಸಿಕೊಂಡು ಇಂದಿನ ಯುವ ಪೀಳಿಗೆಯಲ್ಲಿ ಬೆಳೆಸಿಕೊಂಡು ಹೋಗುವ ಪ್ರಯಾಸದ ಕೆಲಸವೇ ಆಗಿದೆ. ಯಕ್ಷಗಾನದಲ್ಲಿ ನಾವು ಹಲವಾರು ರೀತಿಯಾದಂತಹ ಅಂಶಗಳನ್ನು ನಾವು ನೋಡಬಹುದಾಗಿದೆ ಅವುಗಳೆಂದರೆ ಪ್ರಸಂಗ, ಪಾತ್ರಧಾರಿಗಳು, ವೇಷಭೂಷಣಗಳು, ಭಾಗವತಿಕೆ, ಮಾತುಗಾರಿಕೆ. ನಾವು ಯಕ್ಷಗಾನಾದಲ್ಲಿ ಮೂರು ರೀತಿಯಾದಂತಹ ವಿಭಾಗ ಇರುವುದನ್ನು ನೋಡಬಹುದು .

ನಮ್ಮ ಉ.ಕ. ಜಿಲ್ಲೆಗಳಲ್ಲಿ ನಾವು ಹೆಚ್ಚು ಬಡಗು ತಿಟ್ಟಿನ ಶೈಲಿಯ ಯಕ್ಷಗಾನವನ್ನು ನೋಡುತ್ತೇವೆ. ಹಾಗೇಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಕು ತಿಟ್ಟು ಶೈಲಿ ಕಾಣುತ್ತದೆ. ಬಡಗು ತಿಟ್ಟಿನಲ್ಲಿ ಹಿಮ್ಮೇಲದವರು, ಭಾಗವತರು ತಾಳಗಳನ್ನು ಹಾಗೂ ಚಂಡೆಗಾರರು ಕುಳಿತುಕೊಂಡೆ ಚಂಡೆ ಬಾರಿಸುವದನ್ನು ನೋಡುತ್ತೇವೆ ಹಾಗೆಯೇ ಮುಮ್ಮೇಳದ ಮುಮ್ಮೇಲದ ಕಲಾವಿದರು ಸಹ ವೇಷ ಭೂಷಣಗಳಲ್ಲಿ ಹಾಗೂ ಯಕ್ಷಗಾನದ ತಾಳದ ಆವೃತ್ತಿಯಲ್ಲಿ ವ್ಯತ್ಯಾಸ ವಿರುತ್ತದೆ.

ತೆಂಕುವಿನಲ್ಲಿ ಹಿಮ್ಮೇಳದ ಭಾಗವತರು ತಾಳದ ಬದಲು ಜಾಗಂತೆಗಳನ್ನು ಹಾಗೂ ಹಾಡುವ ಶೈಲಿಯಲ್ಲಿ ಆವೃತ್ತಿಯಲ್ಲಿ ಬೇರೆ ವಿಧದಲ್ಲಿ ಇರುತ್ತದೆ. ಚೆಂಡೆಗಾರರು ನಿಂತುಕೊಂಡೆ ಚೆಂಡೆಯನ್ನು ಬಾರಿಸುತ್ತಾರೆ. ಇಲ್ಲಿ ಬಣ್ಣದ ವೇಷ ಎನ್ನುವುದು ಒಂದು ರೀತಿಯಾಗಿ ವಿಶೇಷವಾಗಿ ಕಾಣುತ್ತದೆ.

ಬಡಬಡಗಯ ತಿಟ್ಟುವಿನಲ್ಲಿ ಬಡಗು ತಿಟ್ಟಿನ ಶೈಲಿಯಲ್ಲೇ ಇದ್ದರು ಸಹ ಅವರ ವೇಷ ಭೂಷಣದಲ್ಲಿ ವ್ಯತ್ಯಾಸವಿದೆ. ಒಂದು ರೀತಿಯಾಗಿ ನಮ್ಮ ಜಿಲ್ಲೆಯಲ್ಲಿ ಕಾಣಸಿಗುವ “ಸುಗ್ಗಿ’ಕುಣಿತದ ರೂಪದಲ್ಲೇ ಇರುತ್ತದೆ ಅದರೆ ಇದನ್ನು ಬಯಲಾಟದ ರೀತಿಯಲ್ಲಿ ಯಕ್ಷಗಾನವನ್ನು ನೋಡಲಾಗುತ್ತದೆ.

ಈ ರೀತಿಯಾದಂತ ಹೆಸರು ಬರಲು ಕಾರಣವೆಂದರೆ ದಿಕ್ಕುಗಳ ಮುಖಾಂತರ ಬಂದಿದೆಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರೂ ಕೂಡ ಹಿಮ್ಮೇಳ ಹಾಗೂ ಮುಮ್ಮೇಲಗಳಲ್ಲಿ ಭಾಗಿಯಾಗಿರುವುದನ್ನು ನಾವು ಕಾಣಬಹುದು ಈ ಕಲೆಯಲ್ಲಿ ಎಷ್ಟೋ ದಿಗ್ಗಜರು ಹೆಸರು ಮಾಡಿ ಎಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಹೇಳುವಾಗ ನಮ್ಮವರೆ ಅದ ಅಂದರೆ ನಮ್ಮ ಜಿಲ್ಲೆಯವರಾದ ಶ್ರೀಯುತ ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ಯವರಿಗೆ ಪದ್ಮಶ್ರೀ ಪ್ರಶಸ್ತಿಯು ಸಹ ಸರಕಾರದಿಂದ ದೊರಕಿದೆ.

ಅದರೆ ಕೊರೊನಾದಂತಹ ಸಂದರ್ಭದಲ್ಲಿ ಎಲ್ಲ ಜನರಿಗಾದಂತೆ ಕಲಾವಿದರ ಬದುಕು ಸಹ ಕಷ್ಟಕ್ಕಿಡಾಯಿತು. ಆದರೆ ಹಲಾವಾರು ಕಡೆ ಜನರಿಲ್ಲದೆ ನೇರ ಪ್ರಸಾರ ಮಾಡಲು ಅವಕಾಶಕೊಟ್ಟಾಗ ಹೊಸರೀತಿಯ ಆವಿಷ್ಕಾರದೊಂದಿಗೆ ಜೀವನ ನಡೆಸಿದರು.

 ರಾಕೇಶ್‌ ಆರ್‌. ಭಟ್ಟ

ಮೈಸೂರು ವಿವಿ

Advertisement

Udayavani is now on Telegram. Click here to join our channel and stay updated with the latest news.

Next