Advertisement

ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬಯಿ:ತವರೂರಿನಲ್ಲಿ ಯಕ್ಷಗಾನ 

03:36 PM May 19, 2017 | Team Udayavani |

ಮುಂಬಯಿ: ಶ್ರೀ ಅಯ್ಯಪ್ಪ  ಯಕ್ಷಕಲಾ ಪ್ರತಿಷ್ಠಾನ ಮುಂಬಯಿ ಕಲಾ ತಂಡದಿಂದ ತವರೂರಿನಲ್ಲಿ ಯಕ್ಷಗಾನ ಪ್ರದರ್ಶನವು ಇತ್ತೀಚೆಗೆ ನಡೆಯಿತು. ಕುಂದಾಪುರದ ಇಡೊರಿಯಲ್ಲಿ ಜಯರಾಮ್‌ ಶೆಟ್ಟಿ ಅವರ ಆಯೋಜನೆಯಲ್ಲಿ ಈ ಕಾರ್ಯಕ್ರಮವು ನಡೆಯಿತು.

Advertisement

ಶ್ರೀ ಅಯ್ಯಪ್ಪ  ಯಕ್ಷಕಲಾ ಪ್ರತಿಷ್ಠಾನ ಮುಂಬಯಿ ಇದರ ಯುವ ಕಲಾವಿದರು ಹಾಗೂ ತವರೂರಿನ ಪ್ರಸಿದ್ಧ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಇದೇ ಸಂದರ್ಭದಲ್ಲಿ ಶಶಿಪ್ರಭಾ ಪರಿಣಯ ಮತ್ತು ಸುದರ್ಶನ ವಿಜಯ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ವಿಶೇಷ ಆಮಂತ್ರಿತರಾಗಿ ಬಡಗುತಿಟ್ಟಿನ ಖ್ಯಾತ ಭಾಗವತ ಹಿಲ್ಲೂರು ರಾಮಕೃಷ್ಣ ಮತ್ತು ಚಂದ್ರಕಾಂತ್‌ ಮೂಡುಬೆಳ್ಳೆ ಅವರ ಭಾಗವತಿಕೆ ಮತ್ತು ಪ್ರತಿಷ್ಠಾನದ ಯುವ ಪ್ರತಿಭೆಗಳಾದ ತನ್ವಿ ರಾವ್‌, ಅಂಕಿತಾ, ಸೌಜನ್ಯಾ ಅವರ ಅಭಿನಯವು ಕಲಾಭಿಮಾನಿಗಳನ್ನು ರಂಜಿಸಿತು. ಹಾಸ್ಯಗಾರರಾಗಿ ಮಾರಣಕಟ್ಟೆ ಮೇಳದ ಶೇಖರ್‌ ಶೆಟ್ಟಿ ಅವರು ಪಾಲ್ಗೊಂಡಿದ್ದರು. ಸುಮಾರು 500 ಕ್ಕೂ ಅಧಿಕ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ 20 ಕಲಾವಿದರುಗಳನ್ನು ಸಮ್ಮಾನಿಸಲಾಯಿತು. ಪ್ರತಿಷ್ಠಾನದ ಕಾರ್ಯದರ್ಶಿ ಮಹೇಂದ್ರ ಶೆಟ್ಟಿ ನಂದೊÅಳ್ಳಿ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next