Advertisement
ಮೊದಲ ದಿನ ‘ಥಿಯೇಟರ್ ಯಕ್ಷ’ದ ಕಲಾವಿದರು ತೆಂಕುತಿಟ್ಟಿನ ಪ್ರಯೋಗಾತ್ಮಕ ‘ಚಕ್ರವ್ಯೂಹ’ ಮತ್ತು ಎರಡನೆಯ ದಿನ ಯಕ್ಷಗಾನದ ಕೇಂದ್ರದ ಕಲಾವಿದರು ‘ಜಟಾಯು ಮೋಕ್ಷ’ ಪ್ರದರ್ಶನಗಳು ದೇಶ-ವಿದೇಶಗಳ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು. ಎರಡೂ ಪ್ರದರ್ಶನಗಳನ್ನು ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶಿಸಿದ್ದರು.
ನೇಶನಲ್ ಸೆಂಟರ್ ಫಾರ್ ದ ಪರ್‌ಫಾರ್ಮಿಂಗ್ ಆರ್ಟ್‌ಸ್‌ನ ಭಾರತೀಯ ಸಂಗೀತ ಕಾರ್ಯಕ್ರಮಗಳ ಸಂಯೋಜನಾ ಮುಖ್ಯಸ್ಥೆಯಾದ ಡಾ. ಸುವರ್ಣಲತಾ ರಾವ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ದೆಹಲಿಯ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನ ಪ್ರಾಚ್ಯವಸ್ತು ಸಂಗ್ರಹಾಲಯದ ಮುಖ್ಯಸ್ಥೆಯಾದ ಡಾ. ಶುಭಾ ಚೌಧುರಿಯವರು ಪ್ರದರ್ಶನದ ಕಥಾನಕಗಳ ವಿವರ ನೀಡಿದರು. ದೆಹಲಿಯ ಜೆಎನ್‌ಯುನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನದ ಇತಿಹಾಸ ಮತ್ತು ಸಮಕಾಲೀನ ಬೆಳವಣಿಗೆಗಳ ಬಗ್ಗೆ ಸಚಿತ್ರವಿವರಣೆಯನ್ನು ಮಂಡಿಸಿದರು. ಎರಡೂ ಪ್ರಸಂಗಗಳ ಮುಕ್ತಾಯದ ಬಳಿಕ ಪ್ರೇಕ್ಷಕರು ಕಲಾವಿದರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.