Advertisement

“ಸಂಸ್ಕೃತಿಯ ಪ್ರಸರಣಕ್ಕೆ ಯಕ್ಷಗಾನದ ಕೊಡುಗೆ ಅಪಾರ’

12:35 PM Apr 01, 2017 | Team Udayavani |

ಉಪ್ಪಿನಂಗಡಿ : ಭಾರತೀಯ ಸಂಸ್ಕೃತಿಯ ಪ್ರಸರಣಕ್ಕೆ ಮತ್ತು ಉಳಿವಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಯಕ್ಷಗಾನದಲ್ಲಿ  ದುಡಿಯುವ ಕಲಾವಿದರ ಬದುಕು ಬೆಳೆಗಿಸುವಲ್ಲಿ ಸಮಾಜದ ಪಾತ್ರ ಮಹತ್ತರದ್ದಾಗಿದೆ ಎಂದು ಖ್ಯಾತ ಯಕ್ಷಗಾನ ಭಾಗವತರಾದ ಸತೀಶ್‌ ಪಟ್ಲ  ತಿಳಿಸಿದರು.

Advertisement

ಅವರು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ನಡೆದ  ಜಿಲ್ಲಾ ಮಟ್ಟದಲ್ಲಿನ 25ನೇ ಘಟಕ ವಾಗಿ  ಅಸ್ತಿ ತ್ವಕ್ಕೆ ಬಂದ ಪಟ್ಲ ಸಂಭ್ರಮ ಫೌಂಡೇಶನ್‌ ಉಪ್ಪಿನಂಗಡಿ ಘಟಕದ ರಚನ ಸಭೆಯಲ್ಲಿ  ಮಾತನಾಡಿದರು.

ಯಕ್ಷಗಾನ ಕಲಾವಿದರಿಗೆ 60 ವರ್ಷದ ಬಳಿಕ ಪಿಂಚಣಿ ಹಾಗೂ ವಿಮಾ ಯೋಜನೆಯ  ಮೂಲಕ ಬದುಕಿನಲ್ಲಿ ಭಧ್ರತೆ ಮೂಡಿಸುವ ಜತೆಗೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಲ್ಲಿ  ಈ ಫೌಂಡೇಶನ್‌ ಕಾರ್ಯೋನ್ಮುಖಗೊಳ್ಳಲಿದೆ ಎಂದರು. ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಜಗದೀಶ್‌ ಶೆಟ್ಟಿ  ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಶ್ರಮಿಸುವ ಕಲಾವಿದ ವೇದಿಕೆಯಲ್ಲಿ  ಮಾತ್ರ ನಗೆ ಬೀರಿದರೆ ಸಾಲದು. ಆತನ ಹಾಗೂ ಆತನ ಕುಟುಂಬವೂ ನಗುತ್ತಾ ಇರಬೇಕೆಂಬ  ಆಶಯದೊಂದಿಗೆ ಸತೀಶ್‌ ಪಟ್ಲ ಕಾರ್ಯೋನ್ಮುಖವಾಗಿರುವುದು ಸಂತಸ ತಂದಿದೆ ಎಂದರು.
ಎನ್‌. ಗೋಪಾಲ ಹೆಗ್ಡೆ, ಯು.ಜಿ. ರಾಧಾ, ರವಿ ಶೆಟ್ಟಿ  ಉಪಸ್ಥಿತರಿದ್ದರು. 

ಉಪ್ಪಿನಂಗಡಿ ಘಟಕದ ಗೌರವಾಧ್ಯಕ್ಷರಾಗಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ, ಉಪಾಧ್ಯಕ್ಷರಾಗಿ ಎನ್‌. ಗೋಪಾಲ ಹೆಗ್ಡೆ, ಪುಷ್ಪರಾಜ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಾಗಿ ರವೀಶ್‌ ಎಚ್‌.ಟಿ., ಜತೆ ಕಾರ್ಯದರ್ಶಿಯಾಗಿ ಅಶೋಕ್‌ ಕುಮಾರ್‌ ರೈ ನೆಕ್ಕರೆ, ಆದರ್ಶ ಶೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಮನೋಜ್‌ ಶೆಟ್ಟಿ, ಜಯಪ್ರಕಾಶ್‌ ಶೆಟ್ಟಿ, ಕೋಶಾಧಿಕಾರಿಗಳಾಗಿ ಕಂಗ್ವೆ ವಿಶ್ವನಾಥ ಶೆಟ್ಟಿ, ಯತೀಶ್‌ ಶೆಟ್ಟಿ ಸುವ್ಯ, ಪ್ರಧಾನ ಸಂಚಾಲಕರಾಗಿ ಶ್ಯಾಮ ಸುದರ್ಶನ, ಜತೆ ಸಂಚಾಲಕರಾಗಿ ರಮೇಶ್‌ ಕಜೆ, ಶಿವ ಕುಮಾರ್‌ ಬಾರಿತ್ತಾಯ, ಗಣೇಶ್‌ ಆಚಾರ್ಯ, ವಿನೀತ್‌ ಶಗ್ರಿತ್ತಾಯ ಆಯ್ಕೆಯಾದರು. ಈ ಸಂದರ್ಭದಲ್ಲಿ ಇತ್ತàಚೆಗೆ ನಿಧನರಾದ ಯಕ್ಷಗಾನ ಕಲಾವಿದ  ಗಂಗಯ್ಯ ಶೆಟ್ಟಿ ಅವರಿಗೆ ನುಡಿನಮನ ಸಲ್ಲಿಸಲಾಯಿತು.

ಶಿಲ್ಪಾ ಆಚಾರ್ಯ, ಜಯರಾಮ ಆಚಾರ್ಯ, ಜಯಪಾಲ್‌ ಶೆಟ್ಟಿ, ರಾಜೇಶ್‌ ಬಂಗೇರ,  ಗುರುರಾಜ್‌ ಭಟ್‌, ಪ್ರವೀಣ್‌, ಹೊನ್ನಪ್ಪ, ಮಲ್ಲಿಗೆ ಕೃಷ್ಣ , ಅಂಬಾಪ್ರಸಾದ್‌, ಶ್ಯಾಮ್‌ ಸುದರ್ಶನ  ಸ್ವಾಗತಿಸಿ, ಸುಧಾಕರ ಶೆಟ್ಟಿ ವಂದಿಸಿದರು. ರವೀಶ್‌ ಅವರು ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next