Advertisement

“ಯಕ್ಷಗಾನ ಕೋಮು ಸೌಹಾರ್ದ ಸಾರಿದೆ’

03:30 AM Jul 10, 2017 | Team Udayavani |

ಕುಂದಾಪುರ:  ಯಕ್ಷಗಾನ ಕಲೆಯ ಪ್ರಭಾವ ಸಮಾಜದಲ್ಲಿ ಜನರನ್ನು ಬುದ್ಧಿವಂತರನ್ನೂ, ವಿಚಾರ ವಂತರನ್ನಾಗಿ ಮಾಡಿಸಿದೆ. ಧಾರ್ಮಿಕ ಪ್ರಜ್ಞೆವುಳ್ಳವರನ್ನಾಗಿಯೂ, ನಾಗರಿಕ ಪ್ರಜ್ಞಾವಂತರನ್ನಾಗಿಯೂ ಎಚ್ಚರಗೊಳಿಸಿದ್ದು ಯಕ್ಷಗಾನ ಕಲೆ.

Advertisement

ಬಹಳ ಹಿಂದಿನ ದಿನವನ್ನು ಯೋಚಿಸುವಾಗ ವಿದ್ಯಾವಂತರನ್ನೊಳ ಗೊಂಡ ಸಮಾಜವಾಗಿರಲಿಲ್ಲ. ಆದರೂ ವಿದ್ಯಾವಂತರಾಗಿಯೇ ಜನರು ಜೀವನ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಯಕ್ಷಗಾನ ತಾಳಮದ್ದಲೆಯ ಕೊಡುಗೆ ಅಪಾರ.  ಈ ಕಲೆಗೆ ಪ್ರೋತ್ಸಾಹಕವಾಗಿ ದೇವಸ್ಥಾನದ ಆಡಳಿತ ಮಂಡಳಿಗಳ ನೆರವು ಅಗತ್ಯವಿರುತ್ತದೆ ಎಂದು ಬಸೂÅರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು  ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಯಶಸ್ವಿ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಇವರ ಸಹಯೋಗದೊಂದಿಗೆ ನಡೆದ ತಾಳಮದ್ದಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುಜಯೀಂದ್ರ ಹಂದೆ, ಹವ್ಯಾಸಿ ಕಲಾವಿದ ದಿವಾಕರ ಶೆಟ್ಟಿ, ಸುದರ್ಶನ ಉರಾಳ, ಲಂಬೋದರ ಹೆಗಡೆ, ಅಶೋಕ್‌ ಕೆರೆಕಟ್ಟೆ, ಉಪಸ್ಥಿತರಿದ್ದರು.ಶ್ರೀ ನಿವಾಸ ಮಾಸ್ಟರ್‌ ವಂದಿಸಿದರು. ಸತೀಶ್ಚಂದ್ರ ಕಾಳವಾರ್ಕರ್‌ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದಲ್ಲಿ ಯಕ್ಷ ಮಿತ್ರರು ಬಸ್ರೂರು ಇವರಿಂದ ಯಕ್ಷಗಾನ ತಾಳಮದ್ದಳೆ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next