Advertisement

ಮಾರ್ಚ್‌ 1ಕ್ಕೆ “ಯಜಮಾನ’ದರ್ಶನ

05:17 AM Feb 11, 2019 | Team Udayavani |

ದರ್ಶನ್‌ ನಾಯಕರಾಗಿರುವ “ಯಜಮಾನ’ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. ಈಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಟ್ರೇಲರ್‌ ಕೂಡಾ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. “ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಳಿಸಿ ನಿಯತ್ತಿಂದ ಕಟ್ಟಿರೋ ಸ್ವಂತ ಬ್ರಾಂಡೋ’ ಎಂಬ ಡೈಲಾಗ್‌ನಿಂದ ಹಿಡಿದು ಚಿತ್ರದಲ್ಲಿ ಬರುವ ಖಡಕ್‌ ಡೈಲಾಗ್‌ಗಳನ್ನು ಅಭಿಮಾನಿಗಳು ಎಂಜಾಯ್‌ ಮಾಡುತ್ತಿದ್ದಾರೆ.

Advertisement

ಅದರಲ್ಲೂ ಟ್ರೇಲರ್‌ನ ಕೊನೆಯಲ್ಲಿ ಬರುವ ಅಂಶ ಅಭಿಮಾನಿಗಳಿಗೆ ಮತ್ತಷ್ಟು ಖುಷಿಕೊಟ್ಟಿದೆ. ಅದು ಚಿತ್ರದ ಬಿಡುಗಡೆಯ ದಿನಾಂಕ. “ಯಜಮಾನ’ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಅನೇಕರಿತ್ತು.  ಈಗ ಅದಕ್ಕೆ ಉತ್ತರ ಸಿಕ್ಕಿದೆ. ಮಾರ್ಚ್‌ 1 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಈ ಮೂಲಕ ಅಭಿಮಾನಿಗಳ ಬಹುದಿನದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಈ ಮೂಲಕ “ಕುರುಕ್ಷೇತ್ರ’ ಮೊದಲು ಬರುತ್ತಾ, “ಯಜಮಾನ’ ಬರುತ್ತಾ ಎಂಬ ಅಭಿಮಾನಿಗಳ ಗೊಂದಲಕ್ಕೂ ತೆರೆಬಿದ್ದಿದೆ.

ಸುಮಾರು ಒಂದೂವರೆ ವರ್ಷಗಳ ನಂತರ ಬರುತ್ತಿರುವ ದರ್ಶನ್‌ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಿದೆ. “ತಾರಕ್‌’ ನಂತರ ದರ್ಶನ್‌ ಅವರ ಯಾವ ಸಿನಿಮಾವೂ ತೆರೆಕಂಡಿಲ್ಲ. ಈಗ “ಯಜಮಾನ’ ತೆರೆಗೆ ಸಿದ್ಧವಾಗಿದೆ. “ಯಜಮಾನ’ ಚಿತ್ರವನ್ನು ವಿ.ಹರಿಕೃಷ್ಣ ಹಾಗೂ ಪಿ.ಕುಮಾರ್‌ ನಿರ್ದೇಶಿಸಿದ್ದು, ಮೀಡಿಯಾ ಹೌಸ್‌ ಬ್ಯಾನರ್‌ನಡಿ ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಿಸಿದ್ದಾರೆ. 
 

Advertisement

Advertisement

Udayavani is now on Telegram. Click here to join our channel and stay updated with the latest news.

Next