Advertisement

Lok Sabha polls:’ಆಪ್ ಕಾ ರಾಮ ರಾಜ್ಯ’ ವೆಬ್ ಸೈಟ್ ಬಿಡುಗಡೆ ಮಾಡಿದ ಆಮ್ ಆದ್ಮಿ ಪಾರ್ಟಿ

03:34 PM Apr 17, 2024 | Team Udayavani |

ಹೊಸದಿಲ್ಲಿ: ಪಕ್ಷದ “ರಾಮ ರಾಜ್ಯ” ದ ಪರಿಕಲ್ಪನೆಯನ್ನು ತೋರಲು ರಾಮ ನವಮಿಯ ಶುಭ ದಿನದಂದು ಆಮ್ ಆದ್ಮಿ ಪಕ್ಷ ಬುಧವಾರ ತನ್ನ “ಆಪ್ ಕಾ ರಾಮ್ ರಾಜ್ಯ” ವೆಬ್‌ಸೈಟ್ ಅನ್ನು ಆರಂಭಿಸಿದೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಭಗವಾನ್ ರಾಮನ ಆದರ್ಶಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಪಕ್ಷ ಹೇಳಿದೆ.

Advertisement

ಜಂಟಿ ಪತ್ರಿಕಾಗೋಷ್ಠಿಯಲ್ಲಿ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ವೆಬ್‌ಸೈಟ್ ಮಾತನಾಡಿ “ರಾಮ ರಾಜ್ಯ” ಪರಿಕಲ್ಪನೆಯನ್ನು ಮತ್ತು ಪಕ್ಷದ ಸರಕಾರಗಳು ಮಾಡಿದ ಜನಪರ ಕೆಲಸವನ್ನು ವೆಬ್ ಸೈಟ್ ಪ್ರದರ್ಶಿಸುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಕಳೆದ 10 ವರ್ಷಗಳಲ್ಲಿ ರಾಮರಾಜ್ಯವನ್ನು ಸಾಕಾರಗೊಳಿಸಲು ಉತ್ತಮ ಶಾಲೆಗಳು, ಮೊಹಲ್ಲಾ ಚಿಕಿತ್ಸಾಲಯಗಳು, ಉಚಿತ ನೀರು ಮತ್ತು ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಸೇರಿ ಅನೇಕ ಅದ್ಭುತವಾದ ಸಾಧನೆಗಳನ್ನು ಮಾಡಿದ್ದಾರೆ” ಎಂದು ಸಿಂಗ್ ಹೇಳಿದರು.

ರಾಮನವಮಿಯಂದು ಕೇಜ್ರಿವಾಲ್ ಅವರ ಜನರ ನಡುವೆ ಇಲ್ಲದಿರುವುದು ಇದೇ ಮೊದಲು ಅವರನ್ನು “ಆಧಾರರಹಿತ” ಪ್ರಕರಣದಲ್ಲಿ “ಸುಳ್ಳು” ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಜೈಲಿಗೆ ಕಳುಹಿಸಲಾಗಿದೆ ಎಂದರು.

ಆಪ್ ಮುಖಂಡರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next