Advertisement

Tennis Doubles: 44ನೇ ವರ್ಷದಲ್ಲಿ ಬೋಪಣ್ಣ ವಿಶ್ವ ನಂ.1

12:37 AM Apr 12, 2024 | Team Udayavani |

ಮಾಂಟೆ ಕಾರ್ಲೋ (ಮೊನಾಕೊ): 44ನೇ ವಯಸ್ಸಿನಲ್ಲಿ ಪುರುಷರ ಟೆನಿಸ್‌ ಡಬಲ್ಸ್‌ ನಲ್ಲಿ ನಂ.1 ಸ್ಥಾನಕ್ಕೇರಿರುವ ರೋಹನ್‌ ಬೋಪಣ್ಣ ಅವರನ್ನು, ವಿಶ್ವ ನಂ.1 ಸಿಂಗಲ್ಸ್‌ ಆಟಗಾರ ನೊವಾಕ್‌ ಜೋಕೋವಿಕ್‌ ಅಭಿನಂದಿಸಿದ್ದಾರೆ. ಬೋಪಣ್ಣ ಅತೀ ಹಿರಿಯ ವಯಸ್ಸಿನಲ್ಲಿ ಡಬಲ್ಸ್‌ನಲ್ಲಿ ನಂ.1 ಸ್ಥಾನಕ್ಕೇರಿದ ದಾಖಲೆ ನಿರ್ಮಿಸಿದ್ದಾರೆ. ಇತ್ತೀಚೆಗೆ ಜೋಕೋವಿಕ್‌ ಸಿಂಗಲ್ಸ್‌ನಲ್ಲಿ ಅತೀ ಹಿರಿಯ ವಿಶ್ವ ನಂ.1 ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದರು.

Advertisement

ಮೊನಾಕೊನಲ್ಲಿ ನಡೆಯುತ್ತಿರುವ ಮಾಂಟೆ ಕಾರ್ಲೊ ಟೆನಿಸ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಸರ್ಬಿಯದ ಜೋಕೋವಿಕ್‌, ಅಲ್ಲಿ ಬೋಪಣ್ಣ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಬಳಿಕ, ಇಬ್ಬರು ಇರುವ ಫೋಟೋವನ್ನು ಟ್ವೀಟ್‌ ಮಾಡಿರುವ ಅವರು, “ವಯಸ್ಸು ಕೇವಲ ಸಂಖ್ಯೆ ಮಾತ್ರ. ನಂ. 1 ಅನ್ನುವುದೇ ನಮಗೆ ಆ ಸಂಖ್ಯೆ’ ಎಂದು ಬರೆಯುವ ಮೂಲಕ ಭಾರತೀಯನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯ ಓಪನ್‌ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯದ ಮ್ಯಾಥ್ಯೂ ಎಬೆxನ್‌-ರೋಹನ್‌ ಬೋಪಣ್ಣ ಜೋಡಿ, ಬಳಿಕ ಮಿಯಾಮಿ ಓಪನ್‌ನಲ್ಲೂ ಗೆದ್ದು ಬೀಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next