Advertisement

Jharkhand; ಶರಣಾದ 12 ಮಂದಿ ನಕ್ಸಲರು:1 ಕೋಟಿ ರೂ.ಇನಾಮು ಇತ್ತು

06:07 PM Apr 11, 2024 | Team Udayavani |

ರಾಂಚಿ: ಲೋಕಸಭೆ ಚುನಾವಣೆಗೆ ಮುನ್ನ, ಗುರುವಾರ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ 12 ಮಂದಿ ಮಾವೋವಾದಿಗಳು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಏಷ್ಯಾದ ದಟ್ಟವಾದ ಸಾಲ್ ಅರಣ್ಯ ಪ್ರದೇಶವಾದ ಸರಂದಾ ಮತ್ತು ಕೊಲ್ಹಾನ್‌ನಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು.

”ಶರಣಾದವರು ಮಿಸಿರ್ ಬೆಸ್ರಾ ಗುಂಪಿಗೆ ಸೇರಿದವರು, ಅವರ ತಲೆಯ ಮೇಲೆ ಒಂದು ಕೋಟಿ ರೂಪಾಯಿ ಇನಾಮು ಇತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಪಶ್ಚಿಮ ಸಿಂಗ್‌ಭೂಮ್ ಅನ್ನು ದೇಶದ ಅತ್ಯಂತ ಎಡಪಂಥೀಯ ಉಗ್ರಗಾಮಿ-ಪೀಡಿತ ಜಿಲ್ಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದು, 46 ಮಾವೋವಾದಿ ಸಂಬಂಧಿತ ಘಟನೆಗಳಿಗೆ ಸಾಕ್ಷಿಯಾಗಿತ್ತು, ಇದರ ಪರಿಣಾಮವಾಗಿ ಕಳೆದ ವರ್ಷ 22 ಸಾವುಗಳು ಸಂಭವಿಸಿದ್ದವು.

ಮೇ 13 ರಂದು ಜಾರ್ಖಂಡ್‌ನ ಸಿಂಗ್‌ಭೂಮ್ ಲೋಕಸಭಾ ಕ್ಷೇತ್ರದ ನಕ್ಸಲ್ ಪೀಡಿತ ಪ್ರದೇಶದ ಹಲವು ಪ್ರದೇಶಗಳು ಮೊದಲ ಬಾರಿಗೆ ದಶಕಗಳ ನಂತರ ಮತದಾನಕ್ಕೆ ಸಾಕ್ಷಿಯಾಗಲಿವೆ. ಸರಂಡಾದಲ್ಲಿ ವಾಸಿಸುವ ಜನರು ತಮ್ಮ ಹಕ್ಕು ಚಲಾಯಿಸಲು ಅನುವು ಮಾಡಿಕೊಡಲು ಪೋಲಿಂಗ್ ತಂಡಗಳು ಮತ್ತು ಸಾಮಗ್ರಿಗಳನ್ನು ಹೆಲಿಕಾಪ್ಟರ್‌ಗಳಿಂದ ಇಳಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next