Advertisement

ರೈತರಿಗೆ ಧೈರ್ಯ ತುಂಬಿದ ಶಾಸಕ ಮುದ್ನಾಳ

03:12 PM Apr 20, 2020 | Naveen |

ಯಾದಗಿರಿ: ಮಳೆಗಾಲದಲ್ಲಿ ಪ್ರವಾಹದಿಂದ ಕೃಷ್ಣ ಹಾಗೂ ಭೀಮಾ ನದಿ ತೀರದ ಗ್ರಾಮಗಳ ರೈತರ ಭತ್ತದ ಬೆಳೆ ಹಾನಿಯಾಯಿತು. ಈಗ ಅಕಾಲಿಕ ಸುರಿದ ಆಲೆಕಲ್ಲು ಮಳೆಯೂ ಅವಾಂತರ ಸೃಷ್ಟಿಸಿದ್ದು, ರೈತರು ಆತಂಕಕ್ಕೊಳಗಾಗಬಾರದು ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

Advertisement

ಜಿಲ್ಲೆಯ ಯಾದಗಿರಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ವಡಗೇರಾ ತಾಲೂಕಿನ ಅನಕಸುಗೂರು, ಗೊಂದೆನೂರ, ತುಮಕೂರ, ಕುರಿಹಾಳ, ಕೊಂಕಲ್‌, ಚನ್ನೂರ, ಐಕೂರ ಗ್ರಾಮಗಳಿಗೆ ಭೇಟಿ ನೀಡಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ರೈತರ ಭತ್ತದ ಬೆಳೆ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಮಳೆ, ಗಾಳಿಯಿಂದ ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ನಾಶವಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಈಗಾಗಲೇ ನಾಶವಾದ ಭತ್ತದ ಬೆಳೆ ಸರ್ವೆ ಮಾಡಿ ಜಿಲ್ಲಾಡಳತಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಶ್ರೀನಿವಾಸರೆಡ್ಡಿ ಪಾಟೀಲ ಚನ್ನೂರ, ಖಂಡಪ್ಪ ದಾಸನ್‌, ಸಿದ್ದಣಗೌಡ ಕಾಡಂನೋರ, ಶಾಂತಪ್ಪ ಗೊಂದೆನೂರ, ಶರಣಗೌಡ ಐಕೂರ, ಅಮೀನರೆಡ್ಡಿ ಕೊಂಕಲ್‌, ಅಮ್ಮನಗೌಡ ಅನಕಸುಗೂರು, ಬಸವರಾಜಪ್ಪಗೌಡ ಚಿಕ್ಕಬೂದುರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next