ರಬಕವಿ-ಬನಹಟ್ಟಿ: ವಾತಾವರಣದಲ್ಲಾದ ವೇಗದ ಬದಲಾವಣೆಯಿಂದ ಇಬ್ಬನಿ, ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದ ದ್ರಾಕ್ಷಿ ಬೆಳೆಗೆ “ದಾವನಿ’ ರೋಗ ಆವರಿಸಿದೆ. ಕಳೆದ ವರ್ಷವೂ ದ್ರಾಕ್ಷಿಗೆ ಈ ರೋಗ ಆವರಿಸಿತ್ತು. ಕಾಂಡ ಕೊರೆಯುವ ಕೀಟಗಳು ಮುತ್ತಿದ್ದವು. ಪ್ರಸಕ್ತ ವರ್ಷವೂ ವೇಗವಾಗಿ ಈ ರೋಗ ಲಗ್ಗೆಯಿಟ್ಟಿದ್ದು, ಬೆಳೆಗಾರ ತೀವ್ರ ಆತಂಕಕ್ಕೊಳಗಾಗಿದ್ದಾನೆ.
Advertisement
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಒಟ್ಟು 2 ಸಾವಿರ ಎಕರೆಯಷ್ಟು ದ್ರಾಕ್ಷಿ ಬೆಳೆಲಾಗಿದೆ. ಅದರಲ್ಲಿ ಜಗದಾಳ, ಬಂಡಿಗಣಿ, ನಾವಲಗಿ, ಹಿಪ್ಪರಗಿ ಗ್ರಾಮಗಳಲ್ಲಿಯೇ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗಿದೆ. ಇಳುವರಿ ಗಣನೀಯವಾಗಿ ಕುಸಿಯುವ ಭೀತಿ ರೈತರನ್ನು ಕಾಡುತ್ತಿದೆ.
ಕಾಲುವೆ ಹರಿದಿದೆ. ಈ ನೀರನ್ನು ಹನಿ ನೀರಾವರಿಯಾಗಿ ಬಳಸಿಕೊಂಡು ದ್ರಾಕ್ಷಿಯನ್ನು ಇನ್ನಷ್ಟು ಸಮೃದ್ಧವಾಗಿ ಬೆಳೆಯಬಹುದಾಗಿದೆ. ಆದರೆ ದ್ರಾಕ್ಷಿಗೆ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ರೈತರಿಗೆ ನಿರಾಸೆಯಾಗಿದೆ. 20 ದಿನಗಳಲ್ಲಿಯೇ ರೋಗ ಶುರು: ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳು ದ್ರಾಕ್ಷಿ ಬೆಳೆ ಚಾಟನಿಗೆ ಅನುಕೂಲಕರ ವಾತಾವರಣ. ಈ 20 ದಿನಗಳಲ್ಲಿ ದ್ರಾಕ್ಷಿ ಮೊಳಕೆಯಾಗುವ ಸಂದರ್ಭ. ಇಂಥ ಸಂದರ್ಭದಲ್ಲಿಯೇ ಕಾಂಡಕ್ಕೆ ರೋಗ
ಅಂಟಿಕೊಂಡು ಸಂಪೂರ್ಣ ನಾಶವಾಗುತ್ತಿದೆ.
Related Articles
Advertisement
ದಾವನಿ ರೋಗದಿಂದ ದ್ರಾಕ್ಷಿ ಬೆಳೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿವೆ. ಈ ರೋಗದಿಂದ ಬೆಳೆ ರಕ್ಷಿಸಿಕೊಳ್ಳಲು ದಿನಂಪ್ರತಿ ಔಷಧ ಸಿಂಪಡಿ ಸುತ್ತಿದ್ದರೂ ತಡೆಯಲು ಸಾಧ್ಯವಾಗುತ್ತಿಲ್ಲ.●ಸುಭಾಸ ಉಳ್ಳಾಗಡ್ಡಿ, ದ್ರಾಕ್ಷಿ ಬೆಳೆಗಾರ, ಜಗದಾಳ ದ್ರಾಕ್ಷಿ ಬೆಳೆ ನಂಬಿದ ನಮಗೆ ಮತ್ತೇ ಹಾನಿ ಭೀತಿ ಕಾಡುತ್ತಿದೆ. ವಿಮಾ ಹಣವೂ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ತೋಟಗಾರಿಕೆ ಇಲಾಖೆ ಪೂರಕ ವ್ಯವಸ್ಥೆ ಮಾಡಬೇಕಿದೆ.
●ರಮೇಶ ಪಾಟೀಲ, ರೈತ ■ ಕಿರಣ ಶ್ರೀಶೈಲ ಆಳಗಿ