Advertisement

Yadagairi: ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಆಟೋ‌ ಪಲ್ಟಿ, ತಪ್ಪಿದ ದುರಂತ.!

03:51 PM Sep 10, 2024 | Team Udayavani |

ಯಾದಗಿರಿ: ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋವೊಂದು ಪಲ್ಟಿಯಾಗಿದ್ದು, ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಜಿಲ್ಲೆಯ ಶಹಾಪುರ ನಗರದ ಬಾಬುಗೌಡ ದರ್ಶನಾಪುರ ವೃತ್ತದ ಬಳಿ ಮಂಗಳವಾರ (ಸೆ.10) ನಡೆದಿದೆ.

Advertisement

ಎದುರಿಗೆ ಬಂದ ಬೈಕ್ ಸವಾರನನ್ನು ತಪ್ಪಿಸಲು ಆಟೋ‌ವನ್ನು ಬಲಕ್ಕೆ ತಿರುಗಿಸಿದ್ದು, ಈ ಸಂದರ್ಭದಲ್ಲಿ ಆಟೋ ಆಯತಪ್ಪಿ ಪಲ್ಟಿಯಾಗಿದೆ ಎಂದು ನಗರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

6 ಜನ‌ ವಿದ್ಯಾರ್ಥಿಗಳಿದ್ದ ಆಟೋ ಪಲ್ಟಿಯಾಗಿದ್ದು, ಭಾರೀ ದುರಂತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ತೆರಳುತ್ತಿದ್ದ ಆಟೋದಲ್ಲಿ‌ 3 ಜನ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ನಗರದ ಆಸ್ಪತ್ರೆಯೊಂದ‌ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನುಳಿದ ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಸಣ್ಣ-ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ನಗರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.