Advertisement

ಸೌಥಂಪ್ಟನ್ ನಲ್ಲಿ ಕೃಪೆ ತೋರಿದ ವರುಣ: ಫೈನಲ್ ಟೆಸ್ಟ್ ನ ಐದನೇ ದಿನದಾಟ ಆರಂಭ

03:53 PM Jun 22, 2021 | Team Udayavani |

ಸೌಥಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಕ್ರಿಕೆಟ್ ಗಿಂತ ಹೆಚ್ಚು ಮಳೆಯೇ ಸದ್ದು ಮಾಡಿದೆ. ಮಳೆಯಿಂದಾಗಿ ನಾಲ್ಕನೇ ದಿನದಾಟ ಸಂಪೂರ್ಣ ರದ್ದಾದ ಬಳಿಕ ಇದೀಗ ಐದನೇ ದಿನದಾಟಕ್ಕೆ ಎರಡೂ ತಂಡಗಳು ಸಜ್ಜಾಗಿದೆ.

Advertisement

ಸೌಥಂಪ್ಟನ್ ನಲ್ಲಿ ಇಂದು ಬಿಸಿಲು ಕಂಡುಬಂದಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಮೊದಲ ದಿನ ಮತ್ತು ನಾಲ್ಕನೇ ದಿನ ಮಳೆಯಿಂದಾಗಿ ಪಂದ್ಯ ನಡೆದಿರಲಿಲ್ಲ. ಎರಡು ಮತ್ತು ಮೂರನೇ ದಿನವೂ ಆಗಾಗ ಮಳೆ ಮತ್ತು ಮಂದ ಬೆಳಕು ಪಂದ್ಯಕ್ಕೆ ಅಡ್ಡಿಯಾಗಿತ್ತು. ಇಂದು ಪಂದ್ಯ ಆರಂಭಕ್ಕೆ ಕೆಲವೇ ನಿಮಿಷಗಳಿರುವಾಗ ಅಲ್ಪ ಮಳೆಯಾಗಿದ್ದು, ಪಂದ್ಯ ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾಯಿತು.

ಇದನ್ನೂ ಓದಿ:ಭಾರೀ ವೈರಲ್ ಆಗುತ್ತಿದೆ ಮಹೇಂದ್ರ ಸಿಂಗ್ ಧೋನಿಯ ನ್ಯೂ ಲುಕ್

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 217 ರನ್ ಗಳಿಸಿದೆ. ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲ್ಯಾಂಡ್ ತಂಡ ಎರಡು ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ. 12 ರನ್ ಗಳಿಸಿರುವ ನಾಯಕ ಕೇನ್ ವಿಲಿಯಮ್ಸನ್ ಮತ್ತು ಖಾತೆ ತೆರೆಯದ ರಾಸ್ ಟೇಲರ್ ಸದ್ಯ ಕ್ರೀಸ್ ನಲ್ಲಿದ್ದಾರೆ. ಭಾರತದ ಪರ ಅಶ್ವಿನ್ ಮತ್ತು ಇಶಾಂತ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next