Advertisement

ಎಲಿನಾ ಸ್ವಿಟೋಲಿನಾಗೆ ಸಿಂಗಲ್ಸ್‌ ಪ್ರಶಸ್ತಿ

10:45 AM Oct 29, 2018 | |

ಸಿಂಗಾಪುರ: ವಿಶ್ವದ 3ನೇ ಶ್ರೇಯಾಂಕಿತ ಜೋಡಿಯಾದ ಟೈಮಿಯಾ ಬಬೋಸ್‌-ಕ್ರಿಸ್ಟಿನಾ ಲಡೆನೋವಿಕ್‌ ಡಬ್ಲ್ಯುಟಿಎ ಫೈನಲ್ಸ್‌ ಡಬಲ್ಸ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ. “ಸಿಂಗಾಪುರ್‌ ಇಂಡೋರ್‌ ಸ್ಟೇಡಿಯಂ’ನಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ ಇವರು ವಿಶ್ವದ ನಂಬರ್‌ ವನ್‌ ಜೋಡಿ ಎಂಬ ಖ್ಯಾತಿಯ ಬಾಬೊರಾ ಕ್ರೆಸಿಕೋವಾ-ಕ್ಯಾಥರಿನಾ ಸಿನಿಯಕೋವಾ ವಿರುದ್ಧ 6-4, 7-5 ಅಂತರದ ಗೆಲುವು ಸಾಧಿಸಿದರು.

Advertisement

ಇದರೊಂದಿಗೆ ಟೈಮಿಯಾ ಬಬೋಸ್‌ ಈ ಪ್ರಶಸ್ತಿಯನ್ನು ಉಳಿಸಿಕೊಂಡಂತಾಗಿದೆ. ಕಳೆದ ವರ್ಷ ಇವರು ಆ್ಯಂಡ್ರಿಯಾ ಲವಕೋವಾ ಜತೆಗೂಡಿ ಚಾಂಪಿಯನ್‌ ಆಗಿದ್ದರು.

ಸ್ವಿಟೋಲಿನಾಗೆ ಜಯ
ವನಿತಾ ಸಿಂಗಲ್ಸ್‌ನಲ್ಲಿ ಉಕ್ರೇನಿನ ಎಲಿನಾ ಸ್ವಿಟೋಲಿನಾ ಪ್ರಶಸ್ತಿ ಎತ್ತಿದರು. 3 ಸೆಟ್‌ಗಳ ಜಿದ್ದಾಜಿದ್ದಿ ಕಾಳಗದಲ್ಲಿ ಅವರು ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ಗೆ 3-6, 6-2, 6-2 ಅಂತರದಿಂದ ಆಘಾತವಿಕ್ಕಿದರು. ಇದು ಸ್ವಿಟೋಲಿನಾ ಗೆದ್ದ ಮೊದಲ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next