Advertisement
ಯೋಗರಾಜ್ ಭಟ್ ಅವರ ನಿರ್ದೇಶನದ ಮೂಲಕ ಬರುವ ಸಿನೆಮಾ ಎಂದಿಗೂ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿಲ್ಲ, ಭಾವನೆಯಿಂದಾಗಲಿ, ಬಾಂಧವ್ಯ ದಿಂದಾಗಲಿ, ಭಾಷಾ ವೈಖರಿ ಯಿಂದಾಗಲಿ ಸಿನಿ ಪ್ರಿಯರನ್ನು ಬಂದಿ ಮಾಡುತ್ತದೆ. ಕಥೆಯ ಆರಂಭ ತುಂಬಾನೇ ಸರಳವಾಗಿ ಶುರುವಾದರೂ ಕಥೆಯನ್ನು ಎಲ್ಲಿಯೂ ನಿಧಾನಗತಿ ಯಾಗಿ ಎನಿಸಲಿಲ್ಲ. ಪ್ರತಿಯೊಂದು ಸನ್ನಿವೇಶವೂ ಅದರ ಹಿಂದಿನ ಪರಿಶ್ರಮ ಹಾಗೂ ಚಾಣಾಕತನ ತೋರಿಸುತಿತ್ತು. ಇಬ್ಬರು ಅನಾಥರು ಸಮಾಜದಲ್ಲಿ ಸರಿಯಾದ ಮಾರ್ಗದರ್ಶನ ಸಿಗದೇ ಸಾಗುವ ದಾರಿ, ಮಾಡುವ ಕೆಲಸ, ಎಲ್ಲವೂ ಸಿನೆಮಾದ ಹೀರೋ ಪಾತ್ರಗಳಿಗೆ ಇನ್ನಷ್ಟು ಮಸಾಲಾ ಸವರಿದೆ.
Related Articles
Advertisement
ಉತ್ತರ ಕನ್ನಡ ಶೈಲಿಯಿಂದ ಸಾಗುವ ಕಥೆ ನಡು ನಡುವಿನಲ್ಲಿ ಅವಾಚ್ಯನ ಶಬ್ದಗಳು ಎಷ್ಟೇ ಬಾರಿ ಬಂದರು ರಾಡಿ ಎನಿಸುವಂತೆ ತೋರಿಸಲ್ಪಟ್ಟಿಲ್ಲ. ನಾನು ಒಬ್ಬ ಕಳ್ಳ ಎಂಬ ವಿಚಾರದಿಂದ ಹಿಡಿದು ನಾನು ಒಬ್ಬ ಮನುಷ್ಯ ಎನ್ನುವ ತನಕ ಕಥೆ ಸಾಗಿದ ರೀತಿ ಬೇಜಾರು ಆದಾಗ ಸಂಭಾಷಣೆಯಲ್ಲಿ ಕೊಡುವ ಎನರ್ಜಿ ಬೂಸ್ಟ್ ಪದಗಳು ಮತ್ತೆ ಗಮನ ಸೆಳೆಯುತ್ತದೆ. ಕರಟಕ ದಮನಕ ಚಿತ್ರವು ಕುಟುಂಬ ಸಹಿತ ನೋಡಬಲ್ಲ ಚಿತ್ರ ಎಂದು ಬಹಳ ಗಟ್ಟಿಯಾಗಿ ಹೇಳ ಬಲ್ಲೆ. ಹೀರೋಗಳು ಇಬ್ಬರನ್ನು ನರಿಗಳಂತೆ ತೋರಿಸುವಲ್ಲಿ ಯೋಗರಾಜ್ ಭಟ್ರು ಗೆದ್ದಿದ್ದಾರೆ.
-ರಕ್ಷಿತ್ ಆರ್. ಪಿ.
ಉಡುಪಿ