Advertisement

ಕುಸ್ತಿ ಪಂದ್ಯಾವಳಿ: ಕಿಷ್ಕಿಂದಾ ಕೇಸರಿಯಾಗಿ ಮಹೇಶ್ ಗೌಡ, ಲಕ್ಷ್ಮಿ ಪಾಟೀಲ್ ಗೆ ಪ್ರಶಸ್ತಿ

05:10 PM Apr 24, 2022 | Team Udayavani |

ಗಂಗಾವತಿ: ಕುಸ್ತಿ ದೇಶದ ಕ್ರೀಡೆಯಾಗಿದ್ದು ಇದು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಕಾಂಗ್ರೆಸ್ ಯುವ ಮುಖಂಡ ಮಂಜುನಾಥ್ ಕಲಾಲ್ ಮಲ್ಲಾಪುರ ಹೇಳಿದರು .

Advertisement

ಅವರು ಅಂಜನಾದ್ರಿ ಬೆಟ್ಟದ ಕೆಳಗೆ ಆನೆಗೊಂದಿಯ ಶ್ರೀ ರಂಗನಾಥ ಸ್ವಾಮಿ ಜಾತ್ರೆಯ ನಿಮಿತ್ತ ಕಿಷ್ಕಿಂದ ಸೇವಾ ಟ್ರಸ್ಟ್ ಚಿಕ್ಕರಾಂಪುರ ವತಿಯಿಂದ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು .

ವಿಜಯನಗರ ಸಾಮ್ರಾಜ್ಯ ಪ್ರಪ್ರಥಮವಾಗಿ ಆನೆಗುಂದಿಯಲ್ಲಿ ಸ್ಥಾಪನೆಗೊಂಡ ನಂತರ ಹಂಪಿಗೆ ಸ್ಥಳಾಂತರಗೊಂಡಿದೆ. ಆನೆಗೊಂದಿ ಭಾಗದ ಕುಸ್ತಿ ಕುಸ್ತಿಪಟುಗಳಿಗೆ ಖ್ಯಾತವಾಗಿತ್ತು. ವಿಜಯನಗರ ಸಾಮ್ರಾಜ್ಯಕ್ಕೆ ಸೈನಿಕರನ್ನು ಆಯ್ಕೆ ಮಾಡುವ ಮುಂಚೆ ಕುಸ್ತಿ ಪಂದ್ಯಾವಳಿಗಳನ್ನು ಆಗಿನ ಮಹಾರಾಜರು ಆಯೋಜನೆ ಮಾಡುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.ಕಿಷ್ಕಿಂದಾ ಸೇವಾಟ್ರಸ್ಟ್ ದೇಸಿ ಆಟಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕುಸ್ತಿ ಪಂದ್ಯಾವಳಿಗಳನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದರು .

ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ್ ನಾಯಕ್ ರಾಂಪುರ ಮಾತನಾಡಿ ಇಂದಿನ ಯುವಕರು ದೇಶೀಯ ಕ್ರೀಡೆ ಕುಸ್ತಿಗೆ ಆದ್ಯತೆ ನೀಡಿ ಆಸಕ್ತಿ ಬೆಳೆಸಿಕೊಳ್ಳಬೇಕು ಇದರಿಂದ ಸದೃಢ ದೇಹ ಸದೃಢ ಮನಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದರು.

Advertisement

ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ವೈ ರಮೇಶ್ ,ಹಿರಿಯ ಪತ್ರಕರ್ತ ಕೆ. ಮಲ್ಲಿಕಾರ್ಜುನ್ ಸಣಾಪುರ ಕಿಷ್ಕಿಂದ ಸೇವಾ ಟ್ರಸ್ಟ್ ಸಂಚಾಲಕ ದೇವೇಂದ್ರ ಚಿಕ್ಕರಾಂಪುರ ಇದ್ದರು .

ಕಿಷ್ಕಿಂದಾ ಕೇಸರಿ ಮುಡಿಗೇರಿಸಿಕೊಂಡ ಕುಸ್ತಿಪಟುಗಳು : ಆನೆಗುಂದಿ ಶ್ರೀ ರಂಗನಾಥ ಸ್ವಾಮಿ ಜಾತ್ರೆಯ ನಿಮಿತ್ಯ ಕಿಷ್ಕಿಂದ ಸೇವಾ ಟ್ರಸ್ಟ್ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಕಿಷ್ಕಿಂದ ಕೇಸರಿಯಾಗಿ ಮಹೇಶ್ ಗೌಡ ಹುಬ್ಬಳ್ಳಿ ಹಾಗೂ ಕಿಷ್ಕಿಂದ ಮಹಿಳಾ ಕೇಸರಿಯಾಗಿ ಲಕ್ಷ್ಮಿ ಪಾಟೀಲ್ ಬೆಳಗಾವಿ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡು ಬೆಳ್ಳಿಯ ಗದೆ ಪ್ರಮಾಣಪತ್ರ ಮತ್ತು ನಗದು ಬಹುಮಾನ ಪಡೆದುಕೊಂಡರು ಹುಬ್ಬಳ್ಳಿ ಬೆಳಗಾವಿ ಖಾನಾಪುರ ಗದಗ ಹೊಸಪೇಟೆ ಮರಿಯಮ್ಮನಹಳ್ಳಿ ಬಳ್ಳಾರಿ ಕೊಪ್ಪಳದಿಂದ 30 ಕ್ಕೂ ಹೆಚ್ಚು ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next