Advertisement

ಟಾಪ್ಸ್‌  ಸ್ಕೀಮ್‌: ರೀತು ಹೊರಕ್ಕೆ

12:30 AM Mar 20, 2019 | Team Udayavani |

ಹೊಸದಿಲ್ಲಿ: ಇತ್ತೀಚೆಗಷ್ಟೇ ಮಿಕ್ಸೆಡ್‌ ಮಾರ್ಷಲ್‌ ಆರ್ಟ್ಸ್ (ಎಂಎಂಎ) ಸೇರಿಕೊಂಡ ಭಾರತದ ಭರವಸೆಯ ರೀತು ಪೋಗಟ್‌ ಅವರನ್ನು ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯಿಂದ (ಟಾಪ್ಸ್‌) ಕೈಬಿಡಲಾಗಿದೆ. ಎಂಎಂಎನಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಹೊರಟ ರಿತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. ಹೀಗಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ರೀತು ಅವರನ್ನು ಟಾಪ್ಸ್‌ ಯೋಜನೆಯಿಂದ ಕೈಬಿಡಲು ನಿರ್ಧರಿಸಿದೆ.

Advertisement

“ಟಾಪ್ಸ್‌ ಯೋಜನೆಯಲ್ಲಿ ಈಗಾಗಲೇ ಸ್ಥಾನ ಪಡೆದಿದ್ದ ಕುಸ್ತಿಪಟು ರೀತು ಪೋಗಟ್‌ ಅವರನ್ನು ಈ ಯೋಜನೆಯಿಂದ ಕೈಬಿಡಲಾಗಿದೆ. ಮಿಕ್ಸಡ್‌ ಮಾರ್ಷಲ್‌ ಆರ್ಟ್ಸ್ ಸೇರಿಕೊಂಡು ಸಿಂಗಾಪುರ್‌ನಲ್ಲಿ ತರಬೇತಿ ಪಡೆಯಲು ಹೋಗಿರುವ ರೀತು 2020ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವಿಲ್ಲದಿರುವ ಕಾರಣ ಅವರನ್ನು ಕೈಬಿಡಲಾಗಿದೆ ಎಂದು ಸಾಯ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next