Advertisement

ED Raids: ಹಣಕಾಸು ಅಕ್ರಮ ಕೇಸ್‌: ಲಾಟರಿ ಕಿಂಗ್‌ ಮಾರ್ಟಿನ್‌ ಕಚೇರಿಗಳ ಮೇಲೆ ಇ.ಡಿ. ದಾಳಿ

11:58 PM Nov 14, 2024 | Team Udayavani |

ಚೆನ್ನೈ:ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ಅಂದರೆ 1,300 ಕೋಟಿ ರೂ.ಗಳಷ್ಟು ದೇಣಿಗೆ ನೀಡಿರುವ, “ಲಾಟರಿ ಕಿಂಗ್‌’ ಎಂದೇ ಹೆಸರು ಗಳಿಸಿರುವ ಚೆನ್ನೈ ಮೂಲದ ಸ್ಯಾಂಟಿಯಾಗೋ ಮಾರ್ಟಿನ್‌ ಕಂಪನಿ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

Advertisement

ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣವೊಂದರ ತನಿಖೆಯ ಭಾಗವಾಗಿ ಸ್ಯಾಂಟಿಯಾಗೋ ಮಾರ್ಟಿನ್‌ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ನಡೆದಿದೆ. ತಮಿಳುನಾಡಿನ ಚೆನ್ನೈ ಮತ್ತು ಕೊಯಮತ್ತೂರು, ಹರ್ಯಾಣದ ಫ‌ರೀದಾಬಾದ್‌, ಪಂಜಾಬ್‌ನ ಲೂಧಿಯಾನ, ಪ.ಬಂಗಾಳದ ಕೋಲ್ಕತ್ತಾದಲ್ಲಿರುವ ಮಾರ್ಟಿನ್‌ ಹಾಗೂ ಅವರ ಅಳಿಯ ಆಧವ್‌ ಅರ್ಜುನ್‌ಗೆ ಸೇರಿರುವ 20 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಲಾಟರಿ ವಂಚನೆ, ಲಾಟರಿಗಳ ಅಕ್ರಮ ಮಾರಾಟ ಸೇರಿದಂತೆ ಬೇರೆ ಬೇರೆ ಆರೋಪಗಳ ಎಫ್ಐಆರ್‌ಗಳನ್ನು ಕೂಡ ಪರಿಗಣಿಸಿ ಕ್ರಮ ಕೈಗೊಂಡಿರುವುದಾಗಿ ಇ.ಡಿ. ಹೇಳಿದೆ.

ಮಾರ್ಟಿನ್‌ ವಿರುದ್ಧದ ಪ್ರಕರಣಗಳ ತನಿಖೆ ಮುಂದುವರಿಸಲು ಇ.ಡಿ.ಗೆ ಮದ್ರಾಸ್‌ ಹೈಕೋರ್ಟ್‌ ಅನುಮತಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next