Advertisement
ಹತ್ಯೆಯಾದ ನಿಶಾ ದಹಿಯಾ ಅಂಡರ್-23 ವಿಭಾಗದ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಕುಸ್ತಿಪಟು ಎಂದು ಬ್ರೇಕಿಂಗ್ ನ್ಯೂಸ್ ಬರತೊಡಗಿತು. ಆದರೆ ತಾನು ಆರಾಮವಾಗಿದ್ದೇನೆ, ಉತ್ತರಪ್ರದೇಶದ ಗೋಂಡಾಕ್ಕೆ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದೇನೆ ಎಂದು ನಿಶಾ ದಹಿಯಾ ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ ಬಳಿಕವಷ್ಟೇ ಈ ಗೊಂದಲಕ್ಕೆ ತೆರೆ ಬಿದ್ದದ್ದು.
Related Articles
Advertisement
“ಹತ್ಯೆಗೊಳಗಾದ ಕುಸ್ತಿಪಟು ಹಲಾಲ್ಪುರ ಗ್ರಾಮದವರು. ಆಕೆಯ ಹೆಸರು ಕೂಡ ನಿಶಾ ದಹಿಯಾ. ಆದರೆ ಅಂಡರ್-23 ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ನಿಶಾ ದಹಿಯಾ ಅಲ್ಲ’ ಎಂದು ಕೋಚ್ ರಣಧೀರ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.ಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಇದರ ಹಿಂದೆ ಅಕಾಡೆಮಿಯ ಕೋಚ್ ಒಬ್ಬರು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆ ಮುಂದುವರಿದಿದೆ.