Advertisement
ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಬಾರಿಗೆ ನೇರವಾಗಿ ಫೈನಲ್‌ಗೇರಿದ ಸಾಧನೆ ಮಾಡಿತ್ತು. ಶುಕ್ರವಾರದ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ರೋಚಕ 5 ರನ್‌ಗಳ ಗೆಲುವನ್ನಾಚರಿಸಿರುವ ಸ್ಮತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಖುಷಿಗೆ ಪಾತ್ರವಾಗಿದೆ.
ಅಂಕಣ ಗುಟ್ಟು ದಿಲ್ಲಿಯ ಅರುಣ್ ಜೇಟ್ಲಿ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಸಹಕರಿಸುವ ಸಾಧ್ಯತೆಯಿದೆ. ಪಂದ್ಯದ ಆರಂಭದಲ್ಲಿ ಇದು ವೇಗಿಗಳಿಗೆ ಅನುಕೂಲ ಒದಗಿಸಿದರೂ ಪಂದ್ಯ ಮುಂದುವರಿದಂತೆ ಸ್ಪಿನ್ನರ್‌ಗಳು ಲಾಭ ಪಡೆಯಬಲ್ಲರು. ಈ ಮೈದಾನದಲ್ಲಿ 150-160 ರನ್ ಗಳಿಸುವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು. ಪಂದ್ಯದ ವೇಳೆ ಮಳೆ ಸಾಧ್ಯತೆ ಇಲ್ಲ.
Related Articles
ಒಟ್ಟು ಪಂದ್ಯ: 4
ಡೆಲ್ಲಿ ಜಯ: 4
ಆರ್‌ಸಿಬಿ ಜಯ: 0
Advertisement