Advertisement

ಪ್ಲೇ ಆಫ್ ಪ್ರವೇಶಿಸಿದ ಯುಪಿ ; ಗ್ರೇಸ್‌ ಹ್ಯಾರಿಸ್‌, ಮೆಕ್‌ಗ್ರಾತ್‌ ಗ್ರೇಟ್‌ ಬ್ಯಾಟಿಂಗ್‌

11:30 PM Mar 20, 2023 | Team Udayavani |

ಮುಂಬಯಿ: ದೊಡ್ಡ ಮೊತ್ತದ ರೋಚಕ ಹಣಾಹಣಿಯಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು 3 ವಿಕೆಟ್‌ಗಳಿಂದ ಉರುಳಿಸಿದ ಯುಪಿ ವಾರಿಯರ್ ವನಿತಾ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯ ಪ್ಲೇ ಆಫ್ ಸುತ್ತನ್ನು ಪ್ರವೇಶಿಸಿದೆ. ಇದರೊಂದಿಗೆ ಪರಾಜಿತ ಗುಜರಾತ್‌ ಹಾಗೂ ಇನ್ನೂ ಒಂದು ಪಂದ್ಯವನ್ನು ಆಡಲಿರುವ ಆರ್‌ಸಿಬಿ ಮನೆಗೆ ಮರಳಿವೆ. ಇನ್ನುಳಿದಿ ರುವುದು ಮುಂಬೈ, ಡೆಲ್ಲಿ ಮತ್ತು ಯುಪಿ ನಡುವಿನ ಒಂದರಿಂದ 3ನೇ ಸ್ಥಾನದ ವರೆಗಿನ ಪೈಪೋಟಿ ಮಾತ್ರ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದು ಕೊಂಡ ಗುಜರಾತ್‌ ಜೈಂಟ್ಸ್‌ 6 ವಿಕೆಟಿಗೆ 178 ರನ್‌ ಗಳಿಸಿ ಸವಾಲೊಡ್ಡಿದರೆ, ಯುಪಿ ವಾರಿಯರ್ 19.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 181 ರನ್‌ ಬಾರಿಸಿತು. 7 ಪಂದ್ಯಗಳಲ್ಲಿ 4ನೇ ಜಯ ಸಾಧಿಸಿತು. ಅಲಿಸ್ಸಾ ಹೀಲಿ ಪಡೆ ಇನ್ನೂ ಒಂದು ಪಂದ್ಯವನ್ನು ಆಡಲಿದ್ದು, ಕೂಟದ ಕೊನೆಯ ಲೀಗ್‌ ಪಂದ್ಯದಲ್ಲಿ ಡೆಲ್ಲಿಯನ್ನು ಎದುರಿಸಲಿದೆ.

ಭಾರೀ ಮೊತ್ತದ ಚೇಸಿಂಗ್‌ ವೇಳೆ ಯುಪಿ ಆರಂಭಿಕ ಕುಸಿತಕ್ಕೆ ಸಿಲುಕಿತು. ದೇವಿಕಾ ವೈದ್ಯ (7), ಅಲಿಸ್ಸಾ ಹೀಲಿ (12) ಮತ್ತು ಕಿರಣ್‌ ನವಿYರೆ (4) ಬೇಗನೇ ಆಟ ಮುಗಿಸಿ ಹೊರಬಿದ್ದರು. ಆದರೆ 4ನೇ ವಿಕೆಟಿಗೆ ಜತೆಗೂಡಿದ ಟಹ್ಲಿಯಾ ಮೆಕ್‌ಗ್ರಾತ್‌-ಗ್ರೇಸ್‌ ಹ್ಯಾರಿಸ್‌ ಪ್ರಚಂಡ ಪ್ರಹಾರಕ್ಕೆ ಮುಂದಾದರು. 8.5 ಓವರ್‌ಗಳಲ್ಲಿ 78 ರನ್‌ ಹರಿದು ಬಂತು.

ಹ್ಯಾರಿಸ್‌ ಅವರಂತೂ ಮುನ್ನುಗ್ಗಿ ಬೀಸುತ್ತಲೇ ಹೋಗಿ 2ನೇ ಅರ್ಧ ಶತಕ ಬಾರಿಸಿದರು. ಅವರ ಮೊದಲ ಫಿಫ್ಟಿ ಕೂಡ ಗುಜರಾತ್‌ ವಿರುದ್ಧವೇ ದಾಖಲಾಗಿತ್ತು. ಅದು ಕೂಡ ಚೇಸಿಂಗ್‌ ಪಂದ್ಯವಾಗಿತ್ತು. ಆ ಪಂದ್ಯವನ್ನೂ ಯುಪಿ 3 ವಿಕೆಟ್‌ಗಳಿಂದ ಗೆದ್ದಿತ್ತು. ಆಗ ಹ್ಯಾರಿಸ್‌ ಅಜೇಯ 59 ರನ್‌ ಹೊಡೆದಿದ್ದರು. ಈ ಬಾರಿ 41 ಎಸೆತಗಳಿಂದ 72 ರನ್‌ ಸಿಡಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ ನಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‌ ಸೇರಿತ್ತು. ಹ್ಯಾರಿಸ್‌ ಹೊರತುಪಡಿಸಿ ಯುಪಿ ಸರದಿಯಲ್ಲಿ ಯಾರೂ ಸಿಕ್ಸರ್‌ ಬಾರಿಸಲಿಲ್ಲ. ಮೆಕ್‌ಗ್ರಾತ್‌ 38 ಎಸೆತ ನಿಭಾಯಿಸಿ 57 ರನ್‌ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 11 ಬೌಂಡರಿ. ಕೊನೆಯಲ್ಲಿ ಸೋಫಿ ಎಕ್‌Éಸ್ಟೋನ್‌ ಗೆಲುವಿನ ಬೌಂಡರಿ ಬಾರಿಸಿದರು.

ಗುಜರಾತ್‌ ಅಮೋಘ ಆರಂಭ
ಗುಜರಾತ್‌ ಆರಂಭ ಅಮೋಘ ವಾಗಿತ್ತು. ಪವರ್‌ ಪ್ಲೇಯಲ್ಲಿ ಲಾರಾ ವೋಲ್ವಾರ್ಟ್‌-ಸೋಫಿಯಾ ಡಂಕ್ಲಿ ಸಿಡಿದು ನಿಂತರು. ಈ ಅವಧಿಯಲ್ಲಿ 3 ವಿಕೆಟ್‌ ಉರುಳಿದರೂ 50 ರನ್‌ ಹರಿದು ಬಂತು.

Advertisement

4ನೇ ವಿಕೆಟಿಗೆ ಒಟ್ಟುಗೂಡಿದ ಡಿ. ಹೇಮಲತಾ ಮತ್ತು ಆ್ಯಶ್ಲಿ ಗಾರ್ಡನರ್‌ ಸೇರಿಕೊಂಡು ಯುಪಿ ಬೌಲಿಂಗ್‌ ದಾಳಿಯನ್ನು ಪುಟಿಗಟ್ಟಿದರು. 93 ರನ್‌ ಪೇರಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಗಾರ್ಡನರ್‌ 39 ಎಸೆತಗಳಿಂದ ಸರ್ವಾಧಿಕ 60 ರನ್‌, ಹೇಮಲತಾ 33 ಎಸೆತ ಎದುರಿಸಿ 57 ರನ್‌ ಬಾರಿಸಿದರು. ಇಬ್ಬರಿಂದಲೂ 6 ಬೌಂಡರಿ, 3 ಸಿಕ್ಸರ್‌ ಸಿಡಿಯಲ್ಪಟ್ಟಿತು.

ಗುಜರಾತ್‌ ಲೀಗ್‌ ವ್ಯವಹಾರ ಮುಗಿಸಿದ್ದು, 8 ಪಂದ್ಯಗಳಲ್ಲಿ 6ನೇ ಸೋಲನುಭವಿಸಿತು.

ಸಂಕ್ಷಿಪ್ತ ಸ್ಕೋರ್‌
ಗುಜರಾತ್‌ ಜೈಂಟ್ಸ್‌- 6 ವಿಕೆಟಿಗೆ 178 (ಗಾರ್ಡನರ್‌ 60, ಹೇಮಲತಾ 57, ಡಂಕ್ಲಿ 23, ಪಾರ್ಶವಿ 29ಕ್ಕೆ 2, ರಾಜೇಶ್ವರಿ 39ಕ್ಕೆ 2). ಯುಪಿ ವಾರಿ ಯರ್-19.5 ಓವರ್‌ಗಳಲ್ಲಿ 7 ವಿಕೆಟಿಗೆ 181 (ಹ್ಯಾರಿಸ್‌ 72, ಮೆಕ್‌ಗ್ರಾತ್‌ 57, ಗಾರ್ತ್‌ 29ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next