Advertisement

ಹೆಚ್ಚುವರಿ ಕೊಠಡಿಗೆ ಶಾಸಕರಿಂದ ಪೂಜೆ

10:03 PM Jan 17, 2020 | Lakshmi GovindaRaj |

ಪಿರಿಯಾಪಟ್ಟಣ: ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಿತರಾದರೆ ಸಮಾಜ ತಾನಾಗಿಯೇ ಬದಲಾಗಲಿದೆ, ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ಶಾಸಕ ಕೆ.ಮಹದೇವ್‌ ಹೇಳಿದರು. ತಾಲೂಕಿನ ಹುಣಸವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 15.75 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಹೆಚ್ಚುವರಿ ಕೊಠಡಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

Advertisement

ತಾಲೂಕಾದ್ಯಂತ ಇರುವ ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಗೊಳಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತರುವ ನಿಟ್ಟಿನಲ್ಲಿ ಶ್ರಮವಹಿಸಿ, ಕಳೆದ ಒಂದು ವರ್ಷದಿಂದ ತಾಲೂಕಾದ್ಯಂತ ಶಾಲಾ ಹೆಚ್ಚುವರಿ ಕೊಠಡಿಗಳು ಹಾಗೂ ಕಾಂಪೌಂಡ್‌ ನಿರ್ಮಾಣ, ಅಡುಗೆ ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಕೇವಲ ಅಲ್ಪ ಅವಧಿಯಲ್ಲಿ ಶಂಕುಸ್ಥಾಪನೆಗೊಳಡ ಎಲ್ಲಾ ಕಾಮಗಾರಿಗಳು ಮುಗಿದು ಇದೀಗ ಉದ್ಘಾಟನೆಗೊಳ್ಳುತ್ತಿವೆ ಎಂದರು.

ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಶೈಕ್ಷಣಿಕ ಬದಲಾವಣೆ ಹಾಗೂ ಶಾಲಾಭಿವೃದ್ಧಿ ಸಮಿತಿ ರಚನೆ, ಅಧಿಕಾರ ನಿರ್ವಹಣೆಯಿಂದ ಕೆಲಸಗಳು ನಿಗದಿತ ಅವಧಿಯಲ್ಲಿಯೇ ಗುಣಮಟ್ಟದಿಂದ ಪೂರ್ಣಗೊಳ್ಳುತ್ತಿವೆ. ಇದಕ್ಕೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಶಿಕ್ಷಕರ ಭಾಗವಹಿಸುವಿಕೆಯಿಂದ ಸಹಕಾರ ಗೊಳ್ಳುತ್ತಿದೆ ಎಂದು ತಿಳಿಸಿದರು.

ತಾಪಂ ಸದಸ್ಯ ಎ.ಟಿ.ರಂಗಸ್ವಾಮಿ, ಮಾಜಿ ಅಧ್ಯಕ್ಷೆ ಪವಿತ್ರ ಯೋಗೀಶ್‌, ಗ್ರಾಪಂ ಅಧ್ಯಕ್ಷ ಕುಮಾರ್‌, ಸದಸ್ಯರಾದ ಹುಚ್ಚಮ್ಮ, ಮುಖಂಡರಾದ ಟಿ.ನಂಜಪ್ಪ, ಲೋಕೋಪಯೋಗಿ ಎಇಇ ನಾಗರಾಜ, ಸಣ್ಣ ನೀರಾವರಿ ಇಂಜಿನೀಯರ್‌ ಪ್ರಭು, ಬಿಸಿಎಂ ವಿಸ್ತರಣಾಧಿಕಾರಿ ಮೋಹನ್‌ ಕುಮಾರ್‌, ಸೆಸ್ಕ್ ಎಇಇ ಕಲೀಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next