Advertisement

ಜಗತ್ತಿನಲ್ಲೇ ಅತಿದೊಡ್ಡ ಒನ್‍ಪ್ಲಸ್‍ ಮಳಿಗೆ ಬೆಂಗಳೂರಿನಲ್ಲಿ ಆರಂಭ

12:06 PM Feb 26, 2022 | Team Udayavani |

ಬೆಂಗಳೂರು: ಜಾಗತಿಕ ತಂತ್ರಜ್ಞಾನ ಬ್ರಾಂಡ್‍ ಆದ ಒನ್‍ಪ್ಲಸ್‍ ಜಗತ್ತಿನಲ್ಲೇ ಅತಿ ದೊಡ್ಡ ಒನ್‍ಪ್ಲಸ್‍ ಎಕ್ಸ್ ಪೀರಿಯನ್ಸ್ ಸ್ಟೋರ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.

Advertisement

ಒನ್‍ಪ್ಲಸ್‍ ಬೂಲೆವಾರ್ಡ್ ಎಂಬ ಹೆಸರಿನ ಈ ಹೊಸ ಸ್ಟೋರ್ ಅನ್ನು ಬೆಂಗಳೂರಿನ ಬ್ರಿಗೇಡ್‍ ರಸ್ತೆಯಲ್ಲಿ ನಿರ್ಮಿಸಲಾಗಿದ್ದು, ವರ್ಚುವಲ್‍ ಮೂಲಕ ಉದ್ಘಾಟಿಸಲಾಯಿತು.

39 ಸಾವಿರ ಚದರ ಅಡಿಯ ಈ ಸ್ಟೋರ್ ಅನ್ನು, 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಉದ್ಯಾನವನದೊಳಗೆ ಓಡಾಡಿಕೊಂಡು ಖರೀದಿಸಿದ ಅನುಭವ ನೀಡುವಂತೆ ರೂಪಿಸಲಾಗಿದೆ. ನೈಸರ್ಗಿಕ ಬೆಳಕಿಗೆ ಆದ್ಯತೆ ನೀಡಲಾಗಿದೆ.

ಇಲ್ಲಿಗೆ ಆಗಮಿಸುವ ಗ್ರಾಹಕರಿಗೆ ಸಮಗ್ರ, ಪ್ರೀಮಿಯಂ ಆಫ್‌ಲೈನ್ ಅನುಭವವನ್ನು ಒದಗಿಸುವಂತೆ ವಿನ್ಯಾಸ ಮಾಡಲಾಗಿದೆ. ಸಾಕಷ್ಟು ನೈಸರ್ಗಿಕವಾಗಿ ನೆಲದ ಗುಣಕ್ಕೆ ಅನುಗುಣವಾಗಿ ನರ್ಮಿಸಲಾಗಿದ್ದು, ಗೋಡೆಗಳಿಗೆ ಟೆರಾಕೋಟಾ ಮಣ್ಣಿನ ಸ್ಪರ್ಶವನ್ನು ನೀಡಲಾಗಿದೆ. ಸ್ಟೋರ್ ಸುತ್ತಲೂ ಗಿಡಮರಗಳ ಹಸಿರು ಬೆಳೆಸಲಾಗಿದೆ. ಭಾರತದಾದ್ಯಂತ ವಿವಿಧ ಕಲಾವಿದರಿಂದ ಪಡೆದ ಹಲವಾರು ಜೇಡಿಮಣ್ಣಿನ ಮತ್ತು ಸೆರಾಮಿಕ್ ಕಲಾಕೃತಿಗಳನ್ನು ಸಹ ಮಳಿಗೆ ಹೊಂದಿದೆ.

ನವೀನ ತಂತ್ರಜ್ಞಾನವನ್ನು ಅನುಭವಿಸಲು, ಸಮಾನ ಮನಸ್ಕ ಒನ್‍ ಪ್ಲಸ್‍ ಕಮ್ಯುನಿಟಿ ಸದಸ್ಯರೊಂದಿಗೆ ಸಂವಹನ ನಡೆಸಲು ಮತ್ತು ಹೊಸ ಅಂಗಡಿಯಲ್ಲಿ ಗುಣಮಟ್ಟದ ಸಮಯವನ್ನು ಕಳೆಯುವ ವಿಶೇಷ ಸ್ಥಳವನ್ನಾಗಿ ರೂಪಿಸಲಾಗಿದೆ. ಒನ್‍ಪ್ಲಸ್‍ ಅಭಿಮಾನಿಗಳಿಗಾಗಿ ವಿಶ್ರಾಂತಿ ಕೋಣೆ, ಗೇಮಿಂಗ್ ವಲಯ ಮತ್ತು ಈವೆಂಟ್‌ಗಳನ್ನು ಆಯೋಜಿಸಲು ಆಡಿಟೋರಿಯಂ ಅನ್ನು ಒಳಗೊಂಡಿದೆ.  ಒನ್‌ಪ್ಲಸ್ ಬೌಲೆವಾರ್ಡ್ ಸಿಗ್ನೇಚರ್ ಕಾಫಿ ಅನುಭವ ವಲಯ, ವಿಶೇಷ ಅನ್‌ಬಾಕ್ಸಿಂಗ್ ವಲಯ ಮತ್ತು ಗ್ರಾಹಕ ಸೇವಾ ಕೇಂದ್ರವನ್ನು ಸಹ ಒಳಗೊಂಡಿದೆ.

Advertisement

ಒನ್‍ಪ್ಲಸ್‍ ಬೂಲೆವಾರ್ಡ್ ಅನ್ನು ಉದ್ಘಾಟಿಸಿ, ಒನ್‍ಪ್ಲಸ್‍ ಇಂಡಿಯಾದ ಸಿಇಓ ಮತ್ತು ಭಾರತದ ಪ್ರದೇಶದ ಮುಖ್ಯಸ್ಥ ನವನೀತ್ ನಕ್ರಾ ಮಾತನಾಡಿ “2014 ರಲ್ಲಿ ಭಾರತದಲ್ಲಿ ಒನ್‍ಪ್ಲಸ್‍ ಪ್ರಯಾಣ ಆರಂಭಿಸಿದಾಗಿನಿಂದಲೂ, ಭಾರತದಲ್ಲಿನ ಅಭಿಮಾನಿಗಳು ಯಾವಾಗಲೂ ನಮ್ಮ ಉತ್ಪನ್ನಗಳನ್ನು ಅತ್ಯಂತ ಧನಾತ್ಮಕವಾಗಿ ಸ್ವೀಕರಿಸಿದೆ. ನಮ್ಮ ಬ್ರ್ಯಾಂಡ್‌ನ ಬೆಳವಣಿಗೆಯಲ್ಲಿ ಭಾರತೀಯ ಸಮುದಾಯವು ಮಹತ್ವದ ಪಾತ್ರವನ್ನು ವಹಿಸಿದೆ ಎಂದರು”.

ಬೂಲೆವಾರ್ಡ್ ನಮ್ಮ ಸಮುದಾಯದ ಸದಸ್ಯರು ಮತ್ತು ಗ್ರಾಹಕರಿಗೆ ನೇರವಾಗಿ ಬ್ರ್ಯಾಂಡ್‌ನೊಂದಿಗೆ ಸಂಪರ್ಕ ಸಾಧಿಸಲು ಮತ್ತು ಆಳವಾದ ಬಂಧವನ್ನು ಬೆಳೆಸಲು ಮೀಸಲಾದ ಸಮುದಾಯ ಕೇಂದ್ರವಾಗಿದೆ. ಭಾರತದಲ್ಲಿ ಒನ್‍ಪ್ಲಸ್‍ ನ ಪ್ರಯಾಣವು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಹಾಗಾಗಿ ಪ್ರಪಂಚದಲ್ಲೇ ನಮ್ಮ ಅತಿದೊಡ್ಡ ಒನ್‍ಪ್ಲಸ್‍ ಅನುಭವ ಮಳಿಗೆಯನ್ನು ಬೆಂಗಳೂರಿನಲ್ಲೇ ಸ್ಥಾಪಿಸಿದ್ದೇವೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಆಫ್‌ಲೈನ್ ಮಾರಾಟ ಕೇಂದ್ರಗಳ ವಿಸ್ತರಣೆಗೆ 100 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ವರ್ಷದ ಅಂತ್ಯದ ವೇಳೆಗೆ 15,000 ಹೆಚ್ಚು ಆಫ್‌ಲೈನ್ ಸ್ಟೋರ್‌ಗಳನ್ನು ಸ್ಥಾಪಿಸುತ್ತಿದೆ. ಇದರಲ್ಲಿ ಪಾಲುದಾರಿಕೆ ಸ್ಟೋರ್‍ ಗಳೂ ಇರುತ್ತವೆ ಎಂದರು.

ಒನ್‍ಪ್ಲಸ್‍ ಬೂಲೆವಾರ್ಡ್‍ ನಲ್ಲಿ ಹೊಸದಾಗಿ ಬಿಡುಗಡೆಯಾದ ಒನ್‍ಪ್ಲಸ್‍ ನೋರ್ಡ್ ಸಿಇ 2 ಸೇರಿದಂತೆ ಎಲ್ಲಾ ಇತ್ತೀಚಿನ ಒನ್‍ಪ್ಲಸ್‍ ಉತ್ಪನ್ನಗಳು ದೊರಕಲಿದೆ.

ತನ್ನ ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲು, ಒನ್‍ಪ್ಲಸ್‍ ತನ್ನ ಆಫ್‌ಲೈನ್ ಸ್ಟೋರ್‌ಗಳಲ್ಲಿ ಅಗತ್ಯ ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳನ್ನು ಜಾರಿಗೆ ತಂದಿದೆ. ಈ ಆರೋಗ್ಯ ಸುರಕ್ಷತಾ ಮುನ್ನೆಚ್ಚರಿಕೆಗಳಲ್ಲಿ ಅಂಗಡಿ ಆವರಣದ ಸಂಪೂರ್ಣ ಶುಚಿಗೊಳಿಸುವಿಕೆ, ಸಾಮಾಜಿಕ ಅಂತರ, ಆಗಾಗ್ಗೆ ತಾಪಮಾನ ತಪಾಸಣೆ ಮತ್ತು ಮಾಸ್ಕ್‌ಗಳ ಬಳಕೆ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next