Advertisement
ವಾರಾಣಸಿಯಿಂದ 12 ಕಿ.ಮೀ. ದೂರದ ಉಮರಾಹಾ ಪ್ರದೇಶದಲ್ಲಿ ಸುಮಾರು 3 ಲಕ್ಷ ಚ.ಅಡಿ ವಿಸ್ತೀರ್ಣದಲ್ಲಿ ಮಂದಿರವನ್ನು ನಿರ್ಮಿಸಲಾಗಿದೆ. 7 ಮಹಡಿಗಳ ಈ ಮಂದಿರದ ಗೋಡೆಗಳಲ್ಲಿ ಸ್ವರವೇದದ ಶ್ಲೋಕಗಳನ್ನು ಕೆತ್ತಲಾಗಿದೆ.
ಹೊಸದಿಲ್ಲಿ-ವಾರಾಣಸಿ ವಂದೇ ಭಾರತ್ ರೈಲು ಸೇರಿದಂತೆ ಒಟ್ಟು 4 ರೈಲುಗಳಿಗೆ ಸೋಮವಾರ ಪ್ರಧಾನಿ ಮೋದಿ ಹಸುರು ನಿಶಾನೆ ತೋರಿದ್ದಾರೆ. ಕೇಸರಿ ಬಣ್ಣದ ವಂದೇ ಭಾರತ್ ರೈಲಿನಲ್ಲಿ ವೈಫೈ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ಜೈವಿಕ ಶೌಚಾಲಯ, ಪ್ರತೀ ಸೀಟಿಗೂ ಚಾರ್ಜಿಂಗ್ ಪಾಯಿಂಟ್ ಸೇರಿ ಅತ್ಯಾಧುನಿಕ ಸೌಲಭ್ಯಗಳಿವೆ. ಇದೇ ವೇಳೆ ದೀನ್ ದಯಾಳ್ ಉಪಾಧ್ಯಾಯ್ ಜಂಕ್ಷನ್‌ನಿಂದ ಭಾವ್‌ಪುರ ಜಂಕ್ಷನ್‌ವರೆಗಿನ ಫ್ರೈಟ್ ಕಾರಿಡಾರ್‌ಗೂ ಚಾಲನೆ ನೀಡಿದ್ದಾರೆ. 10,903 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ.
Related Articles
7 ಮಹಡಿಗಳು, 20,000 ಆಸನ ಸಾಮರ್ಥ್ಯ, 3,00,000 ಚ.ಅಡಿ.: ಒಟ್ಟು ವ್ಯಾಪ್ತಿ
Advertisement
ಮೋದಿಯ ಗ್ಯಾರಂಟಿ ವಾಹನವು ದೇಶಾದ್ಯಂತ ಸೂಪರ್‌ಹಿಟ್ ಆಗುತ್ತಿದೆ. ಜನರ ಸ್ಪಂದನೆಯು ದೇಶವನ್ನು 2047ರ ವೇಳೆಗೆ ಅಭಿವೃದ್ಧಿಯ ಉತ್ತುಂಗಕ್ಕೇರಿಸಲಿದೆ.ನರೇಂದ್ರ ಮೋದಿ, ಪ್ರಧಾನಿ ದೇಶವಾಸಿಗಳಿಗೆ ಮೋದಿಯಿಂದ 9 ಆಗ್ರಹ
ಸ್ವರವೇದ ಮಂದಿರ ಉದ್ಘಾಟನೆ ವೇಳೆ ಮಾತನಾಡಿದ ಪ್ರಧಾನಿ ಮೋದಿ, “9 ಸಂಕಲ್ಪಗಳು ಮತ್ತು 9 ಆಗ್ರಹಗಳನ್ನು’ ಜನರ ಮುಂದಿಟ್ಟಿದ್ದಾರೆ. ನೀರು ಸಂರಕ್ಷಣೆ, ಡಿಜಿಟಲ್ ವಹಿವಾಟಿಗೆ ಪ್ರೇರಣೆ, ಸ್ವತ್ಛತೆಗೆ ಆದ್ಯತೆ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ, ಸಾಧ್ಯವಾದಷ್ಟು ದೇಶದೊಳಗೇ ಪ್ರವಾಸ, ನೈಸರ್ಗಿಕ ಕೃಷಿಗೆ ಪ್ರೋತ್ಸಾಹ, ದಿನನಿತ್ಯ ಸಿರಿಧಾನ್ಯಗಳ ಬಳಕೆ, ಯೋಗ-ಕ್ರೀಡೆಯಂಥ ಫಿಟೆ°ಸ್ ವಿಧಾನಗಳ ಅಳವಡಿಕೆ, ಬಡ ಕುಟುಂಬಕ್ಕೆ ನೆರವು. ಈ 9 ಆಗ್ರಹಗಳನ್ನು ಪೂರೈಸುವಂತೆ ಮೋದಿ ಕರೆ ನೀಡಿದ್ದಾರೆ.