ವಿಶಾಖಪಟ್ಟಣ: ವಿಶಾಖಪಟ್ಟಣದ ಮೀನುಗಾರರಿಗೆ ಬುಧವಾರ ಅಚ್ಚರಿ ಕಾದಿತ್ತು. ಮೀನು ಹಿಡಿಯಲು ಸಮುದ್ರಕ್ಕೆ ಹೊರಟವರಿಗೆ ಕಿನಾರೆಯಲ್ಲಿಯೇ ಎರಡು ಟನ್ ಭಾರದ ಶಾರ್ಕ್ ಸಿಕ್ಕಿತ್ತು.
ಹೇಗಿದ್ದರೂ, ದೊಡ್ಡ ಮೀನು ಸಿಕ್ಕಿದೆಯಲ್ಲ? ಅದನ್ನು ಕತ್ತರಿ ಮಾರಾಟ ಮಾಡಿದರೆ ಹೇಗೆ ಎಂಬ ಯೋಜನೆಯೂ ಅವರಿಗೆ ಬಂದಿತ್ತು . ಅಲ್ಲಿ ಇದ್ದ ಕೆಲವರು ಯೋಚನೆ ಮಾಡಿ, ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸಿಬ್ಬಂದಿ ವರ್ಗ ಮೀನುಗಾರರ ಜತೆಗೆ ವಿಖಾಖಪಟ್ಟಣದ ತಂಟಾಡಿ ಸಮುದ್ರ ತೀರದಲ್ಲಿ ಸಜೀವವಾಗಿ ಬಿದ್ದಿದ್ದ ಶಾರ್ಕ್ ಅನ್ನು ಮರಳಿ ಸಮುದ್ರ ಸೇರಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:ಪವಿತ್ರ ಗೋವು ನಮ್ಮ ತಾಯಿ, ಹಾಸ್ಯದ ವಸ್ತುವಲ್ಲ : ಪ್ರಧಾನಿ ಮೋದಿ ಕಿಡಿ
ಅಂದ ಹಾಗೆ ಈ ಕಾರ್ಯಾಚರಣೆಯ ಫೋಟೋಗಳನ್ನು ಮಾಲ್ಡೀವ್ಸ್‌ನಲ್ಲಿರುವ ಶಾರ್ಕ್ ಸಂಶೋಧನಾ ಕೇಂದ್ರದ ಜತೆಗೂ ಹಂಚಿಕೊಳ್ಳಲಾಗಿದೆ.