Advertisement

ನಾಶವಾಗಿದೆಯೇ ಜಗತ್ತಿನ ದೊಡ್ಡ ವಿಮಾನ?

07:14 PM Feb 26, 2022 | Team Udayavani |

ಜಗತ್ತಿನಲ್ಲಿ ಅತಿದೊಡ್ಡ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆ್ಯಂಟೊನೋವ್‌ ಎಎನ್‌225 (Antonov An225 ) ವಿಮಾನ ಉಕ್ರೇನ್‌ ವಿರುದ್ಧದ ಸಮರದಲ್ಲಿ ನಾಶವಾಗಿದೆಯೇ? ಅದಕ್ಕೆ ಮಿರ್ಯಾ ಎಂಬ ಹೆಸರೂ ಇದೆ. ಪ್ರತಿ ರೆಕ್ಕೆಯಲ್ಲಿ ಮೂರು ಜೆಟ್‌ ಎಂಜಿನ್‌ಗಳನ್ನು ಅದು ಹೊಂದಿದೆ. ಇಂತಿಪ್ಪ ಹೆಗ್ಗಳಿಕೆಯ ವಿಮಾನ ಸದರಿ ಕಾಳಗದಲ್ಲಿ ನಾಶವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಅಂಶವನ್ನು ಪುಷ್ಟೀಕರಿಸುವ ಯಾವುದೇ ಅಂಶಗಳಿಲ್ಲ.

Advertisement

ಕೀವ್‌ನ ಹೋಸ್ಟೋಮೆಲ್‌ ವಿಮಾನ ನಿಲ್ದಾಣದಲ್ಲಿ ಫೆ.5ರಂದು ಕೊನೇಯ ಬಾರಿಗೆ ಅದು ಲ್ಯಾಂಡ್‌ ಆಗಿದ್ದ ಬಗ್ಗೆ ದಾಖಲೆಗಳು ಇವೆ. ಸಾಮಾನ್ಯ ವಿಮಾನಕ್ಕೆ ಹೋಲಿಕೆ ಮಾಡಿದರೆ ಅದಕ್ಕೆ ಹೆಚ್ಚಿನ ಗಾಲಿಗಳು ಇವೆ. ಟ್ವಿಟರ್‌ನಲ್ಲಿ ವೈರಲ್‌ ಆಗಿರುವ ವಿಡಿಯೋಗಳಲ್ಲಿನ ಅಂಶಗಳ ಪ್ರಕಾರ ಹೋಸ್ಟೋಮೆಲ್‌ ವಿಮಾನ ನಿಲ್ದಾಣದ ಮೇಲೆ ಭಾರೀ ಪ್ರಮಾಣದ ದಾಳಿಯಾಗಿದೆ. ಅದಾದ ಕೂಡಲೇ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಈ ವಿಮಾನ ನಿಲ್ದಾಣ ಕೀವ್‌ನಿಂದ ಕೇವಲ 25 ಕಿಮೀ ದೂರದಲ್ಲಿದೆ.

ವಿಮಾನದ ಬಗ್ಗೆ
ನಿರ್ಮಾಣ ಕಂಪನಿ- ಉಕ್ರೇನ್‌ ಸರ್ಕಾರದ ಆ್ಯಂಟೊನೋವ್‌ ಸ್ಟೇಟ್‌ ಎಂಟರ್‌ಪ್ರೈಸ್‌
84 ಮೀಟರ್‌- ಅದರ ಉದ್ದ
88.4 ಮೀಟರ್‌- ರೆಕ್ಕೆಯ ಉದ್ದ
18.2 ಮೀಟರ್‌- ವಿಮಾನದ ಉದ್ದ
6, 39,999 ಕೆ.ಜಿ.- ಟೇಕಾಫ್ ಆಗುವ ಸಂದರ್ಭದಲ್ಲಿ ವಿಮಾನದ ತೂಕ

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next