Advertisement
ಭಾರತದ ಹೊರಗೆ ಸ್ಥಾಪಿಸಿರುವ ವಿಶ್ವದ ಮೊದಲ ಯೋಗ ವಿ.ವಿ. ಇದಾಗಿದ್ದು, ವಿವೇಕಾನಂದ ಯೋಗ ವಿಶ್ವವಿದ್ಯಾನಿಲಯ ಎಂದು ಹೆಸರಿಡಲಾಗಿದೆ.
ಅಮೆರಿಕದಲ್ಲಿ ಯೋಗ ವಿ.ವಿ. ಆರಂಭವಾಗಿರುವುದಕ್ಕೆ ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತು ಯೋಗ ಗುರು ಬಾಬಾ ರಾಮ್ ದೇವ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ ಭಾರತದ ಹೆಮ್ಮೆ ಮೊಳಗಲಿದೆ ಎಂದು ಹೇಳಿದ್ದಾರೆ.
Related Articles
ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಎಸ್-ವ್ಯಾಸ) ಕುಲಪತಿ, ಖ್ಯಾತ ಯೋಗಗುರು ಡಾ| ಎಚ್.ಆರ್. ನಾಗೇಂದ್ರ ಯೋಗ ವಿ.ವಿ.ಯ ಮೊದಲ ಅಧ್ಯಕ್ಷರಾಗಿದ್ದಾರೆ. ಇವರು ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ಗುರು ಎಂಬುದು ವಿಶೇಷ. ಪ್ರಸಕ್ತ ವರ್ಷದ ತರಗತಿ ಆಗಸ್ಟ್ 24ರಿಂದ ಆರಂಭವಾಗಲಿದೆ.
Advertisement
ಅಲೋಪತಿ ಹಾಗೂ ಆಯುಷ್ ವ್ಯವಸ್ಥೆಗಳ ಮೂಲಕ ಸಮಗ್ರವಾದ ಆರೋಗ್ಯ ರಕ್ಷಣೆಯನ್ನು ವಿಶ್ವಕ್ಕೆ ನೀಡುವ ನಿಟ್ಟಿನಲ್ಲಿ ಅಧ್ಯಯನ ಹಾಗೂ ಸಂಶೋಧನೆ ನಡೆಸಲಾಗುವುದು. ಈ ವಿ.ವಿ.ಯ ಮೂಲಕ ಪೂರ್ವ ಹಾಗೂ ಪಶ್ಚಿಮಗಳಲ್ಲಿನ ಅತ್ಯುತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಡೆಸಲಾಗುವುದು.– ಡಾ| ಎಚ್.ಆರ್. ನಾಗೇಂದ್ರ, ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಅಧ್ಯಕ್ಷರು