Advertisement

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

01:20 AM Nov 30, 2024 | Team Udayavani |

ಬೆಂಗಳೂರು: ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ಕಡಿತಗೊಳಿಸಿ ಆರ್ಥಿಕ ಸಂಕಷ್ಟದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಆರ್ಥಿಕ ನೆರವು ನೀಡಲು ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಂಪಿ ಕನ್ನಡ ವಿ.ವಿ.ಯು ಕನ್ನಡದ ಅಸ್ಮಿತೆಯಾಗಿದ್ದು, ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೊಳಗಾಗಿರುವುದು ನೋವು ತಂದಿದೆ ಎಂದರು.

ಮಂಡ್ಯ ಸಾಹಿತ್ಯ ಸಮ್ಮೇಳನದ ಭೋಜನವನ್ನು ಸರಳವಾಗಿ ಏರ್ಪಡಿಸಲು, ಸಾಧ್ಯವಾದಷ್ಟು ಇನ್ನಿತರ ಖರ್ಚುಗಳನ್ನು ಕಡಿತಗೊಳಿಸಿ ಉಳಿತಾಯ ಮೊತ್ತವನ್ನು ಹಂಪಿ ಕನ್ನಡ ವಿ.ವಿ.ಗೆ ನೀಡುವ ಆಲೋಚನೆ ಇದೆ. ಹಂಪಿ ವಿ.ವಿ.ಗೆ ಆರ್ಥಿಕವಾಗಿ ನೆರವಾಗುವ ವಿಚಾರದಲ್ಲಿ ಸಾಹಿತ್ಯ ಸಮ್ಮೇಳನದ ಕೋಶಾಧಿಕಾರಿಗಳಾದ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಪರಿಷತ್ತಿನ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಖರ್ಚುಗಳನ್ನು ಕಡಿತಗೊಳಿಸಿ ಹಂಪಿ ವಿ. ವಿ.ಗೆ ಸಹಾಯ ಮಾಡಿದಲ್ಲಿ ಸಮ್ಮೇಳನದ ಆಚರಣೆ ಅರ್ಥಪೂರ್ಣವಾಗಲಿದೆ ಎಂಬ ಭಾವನೆಯಿಂದ ಈ ಸಲಹೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next