Advertisement

ಗುಜರಾತ್ ನಲ್ಲಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ !

10:47 AM Jan 07, 2019 | |

ಅಹ್ಮದಾಬಾದ್: ವಿಶ್ವದಲ್ಲಿಯೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಗುಜರಾತ್ ನಲ್ಲಿ ನಿರ್ಮಾಣವಾಗುತ್ತಿದೆ. ಅಹ್ಮದಾಬಾದ್ ನ ಮೊಟೇರಾ ಕ್ರೀಡಾಂಗಣ ವಿಶ್ವ ಕ್ರಿಕೆಟ್ ನ ಅತೀ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 

Advertisement

ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣ ಸದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಮ್. ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಒಮ್ಮೆಗೆ ಒಂದು ಲಕ್ಷ ಜನರು ಕುಳಿತು ಪಂದ್ಯ ವೀಕ್ಷಿಸುವ ಅವಕಾಶವಿದೆ. ಆದರೆ ಭಾರತದಲ್ಲಿ ನಿರ್ಮಾಣವಾಗಲಿರುವ ಮೊಟೇರಾ ಕ್ರೀಡಾಂಗಣದಲ್ಲಿ ಒಮ್ಮೆಗೆ ಒಂದು ಲಕ್ಷ ಹತ್ತು ಸಾವಿರ ಅಭಿಮಾನಿಗಳು ಕುಳಿತು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಬಹುದು. ಈ ಬಗ್ಗೆ ಟ್ವೀಟ್ ಮಾಡಿರುವ ಗುಜರಾತ್ ರಾಜ್ಯ ಕ್ರಿಕೆಟ್ ಸಂಸ್ಥೆ ಉಪಾಧ್ಯಕ್ಷ ಪರಿಮಾಲ್ ನತ್ವಾನಿ, ಹೊಸ ಸ್ಟೇಡಿಯಮ್ ನ ಮಾಹಿತಿ ಜೊತೆಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಈ ಹಿಂದೆ ಮೊಟೇರಾದಲ್ಲಿದ್ದ  ಕ್ರೀಡಾಂಗಣದಲ್ಲಿ 54  ಸಾವಿರ ಜನರು ಕುಳಿತು ಪಂದ್ಯ ವೀಕ್ಷಣೆ ಮಾಡಲು ಸಾಧ್ಯವಾಗುತ್ತಿತ್ತು. ಹೊಸ ಕ್ರೀಡಾಂಗಣ ನಿರ್ಮಿಸುವ ಸಲುವಾಗಿ ಇದನ್ನು 2016ರಲ್ಲಿ ನೆಲಸಮ ಮಾಡಲಾಗಿತ್ತು. ಸುಮಾರು 700 ಕೋಟಿ ರೂಪಾಯಿ ವೆಚ್ಛದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸ್ಟೇಡಿಯಮ್ ನಲ್ಲಿ ನಾಲ್ಕು ಡ್ರೆಸ್ಸಿಂಗ್  ರೂಮ್, 50 ಕೊಠಡಿಗಳು, ಒಳಾಂಗಣ ಕ್ರಿಕೆಟ್ ತರಬೇತಿ ಕೇಂದ್ರಗಳು ಇರಲಿವೆ. ಸ್ಟೇಡಿಯಮ್ ಹೊರಗೆ ಸುಮಾರು ಮೂರು ಸಾವಿರ ಕಾರ್ ಗಳು ಮತ್ತು ಹತ್ತು ಸಾವಿರ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ. 

Advertisement

Udayavani is now on Telegram. Click here to join our channel and stay updated with the latest news.

Next