Advertisement

ಯುಕೆಯಲ್ಲಿ 2ನೇ ವಿಶ್ವಯುದ್ಧ ಕಾಲದ ಬಾಂಬ್​ ಸ್ಫೋಟ

08:26 AM Feb 12, 2023 | Team Udayavani |

ಗ್ರೇಟ್‌ ಯಾರ್‌ಮೌಥ್‌: ಇಂಗ್ಲೆಂಡ್‌ನ‌ ಗ್ರೇಟ್‌ ಯಾರ್‌ಮೌಥ್‌ ನಗರದ ನಾರ್‌ಫೋಕ್‌ ಎಂಬಲ್ಲಿ 2ನೇ ವಿಶ್ವಯುದ್ಧ ಕಾಲದ ಬಾಂಬ್‌ ಸ್ಫೋಟಗೊಂಡಿದೆ.

Advertisement

ಹಲವು ಮೈಲಿ ದೂರದವರೆಗೆ ಅದರ ಸದ್ದು ಕೇಳಿಸಿದೆ ಮತ್ತು ನೆಲ ನಡುಗಿದೆ. ಯೇರ್‌ ನದಿ ಸಮೀಪ ಪತ್ತೆಯಾಗಿದ್ದ ಬಾಂಬ್‌ ಅನ್ನು ಪೊಲೀಸರು ನಿಷ್ಕ್ರಿಯಗೊಳಿಸುವ ವೇಳೆ ಈ ಘಟನೆ ನಡೆದಿದೆ. ಅದಕ್ಕಾಗಿ ಸ್ಥಳೀಯ ಜನರನ್ನು ಬೇರೆಡೆ ಕಳುಹಿ ಸಿಕೊಡಲಾಗಿತ್ತು.

ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಹಾಕಲಾಗಿತ್ತು. ಬಾಂಬ್‌ನ ಒಳಗೇ ಸ್ಫೋಟಕಗಳು ನಿಧಾನಕ್ಕೆ ಸುಟ್ಟು ಹೋಗುವಂತೆ ಮಾಡುವುದು ಅವರ ತಂತ್ರವಾಗಿತ್ತು. ಈ ಪ್ರಕ್ರಿಯೆಯಲ್ಲಿ ದಿಢೀರನೆ ಬಾಂಬ್‌ ಸಿಡಿಯಿತು. ಅದು 250 ಕೆ.ಜಿ. ತೂಕವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next