Advertisement
ಗೋಕಾಕ್ ಡಿವಿಜನ್‌ನ ಬ್ರಾಂಚ್ ಪೋಸ್ಟ್ ಮಾಸ್ಟರ್ ಶಂಕರ್ ವೈ.ಹರಿಜನ್, ದೊಡ್ಡಕಲ್ಲ ಸಂದ್ರ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಎಚ್.ಅಶ್ವತ್ಥ್, ಬೆಂಗಳೂರು ದಕ್ಷಿಣ ಡಿವಿಜನ್‌ನ ಜಯನಗರ ಮುಖ್ಯ ಅಂಚೆ ಕಚೇರಿಯ ಪೋಸ್ಟಲ್ ಅಸಿಸ್ಟೆಂಟ್‌ಎನ್.ಸೋಮಶೇಖರ್, ಬೆಂಗಳೂರು ಅಂಚೆ ಕಚೇರಿಯ ತಾಂತ್ರಿಕ ವಿಭಾಗದ ಅಸಿಸ್ಟೆಂಟ್ ಸೂಪರಿಂಟೆಡೆಂಟ್ ಜೆ.ಮೋಹನ್, ವ್ಯವಹಾರಿಕ ವಿಭಾಗದ ಅಸ್ಟಿಸ್ಟೆಂಟ್ ಪೋಸ್ಟ್ ಮಾಸ್ಟರ್ ಜನರಲ್ ವಿ.ತಾರಾ, ಪೇಮೆಂಟ್ ಚಾನೆಲ್ ಡಿವಿಜನ್‌ನ ಪೋಸ್ಟಲ್ ಅಸಿಸ್ಟೆಂಟ್ ಜೆ.ಶ್ರೀವಾತ್ಸವ, ಗದಗ ಡಿವಿಜನ್‌ನ ಬ್ರಾಂಚ್ ಪೋಸ್ಟ್ ಮಾಸ್ಟರ್ ನಾಗಮ್ಮ ಎಸ್.ಮಂತ ಹಾಗೂ ಟಿ.ಧನಂಜಯ ಅವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಕೋವಿಡ್ ಸಂದರ್ಭದಲ್ಲಿ ಅಂಚೆ ಇಲಾಖೆ ತೋರಿದ ಕಾರ್ಯ ಪ್ರಶಂಸನೀಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪ.ರವಿಕುಮಾರ್ ಹೇಳಿದ್ದರು. ಜಿಪಿಒನ ಮೇಘದೂತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾಕ್ ಸೇವಾ ಪ್ರಶಸ್ತಿ ವಿಜೇತರನ್ನು ಗೌರವಿಸಿ ಮಾತನಾಡಿದರು. ಕಾಲೇಜು ದಿನಗಳಲ್ಲಿ ಮನೆಯಿಂದ ಬರುತ್ತಿದ್ದ ಪತ್ರಗಳಿಗಾಗಿ ಕಾಯುತ್ತಿದ್ದೆ.ಆದರೆ ಇತ್ತೀಚಿನ ದಿನಗಳಲ್ಲಿ ಪತ್ರ ಬರೆಯುವ ಸಂಸ್ಕೃತಿ ಕೂಡ ಕಡಿಮೆ ಆಗುತ್ತಿದೆ.ಜತೆಗೆ ಅಂಚೆ ಬಾಕ್ಸ್ ಗಳು ಕೂಡ ಮರೆಯಲಾಗುತ್ತಿವೆ.ಪತ್ರ ಬರೆಯುವ ಸಂಸ್ಕೃತಿಯನ್ನು ನಾವು ಬಿಡಬಾರದು ಎಂದರು.
Related Articles
Advertisement
ಆಧುನಿಕ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ತಾಂತ್ರಿಕವಾಗಿ ತಾನು ಕೂಡ ಬದಲಾವಣೆ ಹೊಂದಿ ಜನರಿಗೆ ಅನುಪಮ ಸೇವೆ ಒದಗಿಸುತ್ತಿದೆ. ಅಂಚೆ ಇಲಾಖೆ ಜನಸೇವೆಯ ಕಾರ್ಯ ಹೀಗೆ ಮುಂದುವರಿಯಲಿ ಎಂದರು. ಈ ವೇಳೆ ಕರ್ನಾಟಕ ಸರ್ಕಲ್‌ನ ಮುಖ್ಯ ಪ್ರಧಾನ ಪೋಸ್ಟ್ ಮಾಸ್ಟರ್ ಶಾರದಾ ಸಂಪತ್ ಸೇರರಿದಂತೆ ಮತ್ತಿತರರು ಉಪಸ್ಥಿತರಿದ್ದರು.