Advertisement
ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘದಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ| ಗಂಗಂ ಸಿದ್ದಾರೆಡ್ಡಿ, ಮಾನಸಿಕ ಒತ್ತಡದಿಂದ ಹೃದಯ ಬಡಿತ ಹೆಚ್ಚಿ ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ. ತಲೆನೋವು, ಮೈಕೈ ನೋವು, ಬೆನ್ನು-ಕತ್ತು ನೋವು, ಮಲಬದ್ದತೆಗಳಿಗೆ ಒತ್ತಡವೂ ಕಾರಣ. ಮೆದುಳು ಮತ್ತು ಮನಸ್ಸಿನ ಮೇಲೆ ವಿಪರೀತ ಒತ್ತಡ ಬಿದ್ದಾಗ ಸಿಟ್ಟು, ಸೆಡವು, ಕಿರಿಕಿರಿ, ಏಕಾಗ್ರತೆ ಕೊರತೆ ಉಂಟಾಗುತ್ತದೆ ಎಂದರು.
ಆಡಳಿತ ವೈದ್ಯಾಧಿಕಾರಿ ಡಾ| ಹನುಮಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿ ಕಾರಿ ಡಾ| ಚಂದ್ರಮೋಹನ, ಎಪಿಪಿ ಪ್ರವೀಣ್‌ಕುಮಾರ್, ವಕೀಲ ಕೆ. ಚಂದ್ರಾಚಾರಿ ಮತ್ತಿತರರು ಇದ್ದರು.
ಜಗತ್ತಿನ ಜನರಲ್ಲಿ ಸ್ವಾಸ್ಥ ಮಾನಸಿಕತೆ ಕ್ಷೀಣಿಸಿದ್ದರಿಂದ 1992ರಿಂದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಮಾನಸಿಕ ವ್ಯಾಧಿಗಳಿಗೆ ದೆವ್ವ-ಭೂತಗಳ ಹಣೆಪಟ್ಟಿ ಕಟ್ಟುವುದರಿಂದ ಮಾನಸಿಕ ರೋಗ ವಾಸಿಯಾಗುವುದಿಲ್ಲ, ಚಿಕಿತ್ಸೆ ಫಲ ನೀಡುವುದಿಲ್ಲ ಎನ್ನುವ ತಪ್ಪು ಕಲ್ಪನೆ ಹೋಗಲಾಡಿಸಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆ ಉದ್ದೇಶ. –ಜಿ.ಎಚ್. ಭಾಗೀರಥಿ, ನ್ಯಾಯವಾದಿ