Advertisement

World Junior Squash: ವಿಶ್ವ ಜೂನಿಯರ್‌ ಸ್ಕ್ವಾಷ್‌; ಭಾರತ ತಂಡಗಳಿಗೆ ಗೆಲುವು

10:03 PM Jul 20, 2024 | Team Udayavani |

ಹ್ಯೂಸ್ಟನ್‌: ವಿಶ್ವ ಜೂನಿಯರ್‌ ಸ್ಕ್ವಾಷ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬಾಲಕ ಮತ್ತು ಬಾಲಕಿಯರ ತಂಡಗಳು ತಮ್ಮ ಪಂದ್ಯಗಳಲ್ಲಿ ಜಯ ಸಾಧಿಸಿವೆ. ಬಾಲಕರು ಬ್ರಝಿಲ್ ತಂಡವನ್ನು 3-0 ಅಂತರದಿಂದ ಸೋಲಿಸಿ  ಎಫ್’ ಬಣದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

Advertisement

ಬಾಲಕಿಯರು ಅನುಕ್ರಮವಾಗಿ ಬ್ರಝಿಲ್‌ ಮತ್ತು ಆಸ್ಟ್ರೇಲಿಯಾ ತಂಡವನ್ನು 3-0 ಅಂತರದಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರುವುದನ್ನು ಖಚಿತಪಡಿಸಿದ್ದಾರೆ.

ಪ್ರಿ-ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬಾಲಕರು ಕೆನಡ ತಂಡವನ್ನು ಎದುರಿಸಲಿದ್ದಾರೆ. ಬಾಲಕಿಯರು  “ಡಿ’ ಬಣದ ಅಂತಿಮ ಪಂದ್ಯದಲ್ಲಿ ಹಾಂಕಾಂಗ್‌ ತಂಡವನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next