Advertisement

ಷಿಕಾಗೋದಲ್ಲಿ ವಿಶ್ವ ಹಿಂದೂ ಕಾಂಗ್ರೆಸ್‌ ಶುರು

06:00 AM Sep 08, 2018 | |

ನವದೆಹಲಿ/ಷಿಕಾಗೋ: ಸುಮಾರು 2500 ಮಂದಿ ಪ್ರತಿನಿಧಿಗಳು, 220 ಮಂದಿ ಗಣ್ಯರ ಉಪಸ್ಥಿತಿಯಲ್ಲಿ ಷಿಕಾಗೋದಲ್ಲಿ ಎರಡನೇ ವಿಶ್ವ ಹಿಂದೂ ಕಾಂಗ್ರೆಸ್‌ ಶುರುವಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಅಮೆರಿಕಕ್ಕೆ ತೆರಳಿದ್ದಾರೆ. ಭಾನುವಾರ ಅವರು ಸಮ್ಮೇಳನ ಉದ್ದೇಶಿಸಿ ಮಾತನಾಡಲಿದ್ದಾರೆ. 

Advertisement

ಶುಕ್ರವಾರದಿಂದ ಭಾನುವಾರದ ವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಜಗತ್ತಿನೆಲ್ಲೆಡೆಯಿಂದ ಸಾವಿರಾರು ಹಿಂದೂಗಳು ಪಾಲ್ಗೊಳ್ಳಲಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರೂ ಭಾಗವಹಿಸಲಿದ್ದಾರೆ. ಷಿಕಾಗೋದ ಲ್ಯಾಂಬೋರ್ಡ್‌ನಲ್ಲಿರುವ ಯಾರ್ಕ್‌ಟೌನ್‌ ಶಾಪಿಂಗ್‌ ಸೆಂಟರ್‌ನ ದಿ ವೆಸ್ಟಿನ್‌ ಹೋಟೆಲ್‌ನಲ್ಲಿ ಈ ಸಮ್ಮೇಳನ ನಡೆಯಲಿದೆ. 2014ರಲ್ಲಿ ದೆಹಲಿಯಲ್ಲಿ ಮೊದಲ ಬಾರಿಗೆ ನಡೆಸಲಾಗಿದ್ದು, ಇದು ಎರಡನೇ ಸಮ್ಮೇಳನ. ಆಗಲೂ ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿದ್ದ ದಿ. ಅಶೋಕ್‌ ಸಿಂಘಾಲ್‌ ಮತ್ತಿತರ ಗಣ್ಯರು ಇದರಲ್ಲಿ ಭಾಗಿಯಾಗಿದ್ದರು. 

1893ರಲ್ಲಿ ಸ್ವಾಮಿ ವಿವೇಕಾನಂದರು ಧಾರ್ಮಿಕ ಸಂಸತ್‌ನಲ್ಲಿ ಮಾಡಿದ ಭಾಷಣಕ್ಕೆ ಸರಿಯಾಗಿ 125 ವರ್ಷ ತುಂಬಲಿದ್ದು, ಹೀಗಾಗಿ ಈ ಬಾರಿಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಪ್ರಮುಖರು ಯಾರು?
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಆರ್ಟ್‌ ಆಫ್ ಲಿವಿಂಗ್‌ನ ಶ್ರೀಶ್ರೀ ರವಿಶಂಕರ್‌ ಗುರೂಜಿ, ಬಿ.ಆರ್‌.ಶೆಟ್ಟಿ, ದತ್ತಾತ್ರೇಯ ಹೊಸಬಾಳೆ, ಅರವಿಂದ ಪನಗಾರಿಯಾ, ಅನುಪಮ್‌ ಖೇರ್‌, ಅಮಿತ್‌ ತ್ರಿಪಾಠಿ.

ಸಮ್ಮೇಳನ ಎಲ್ಲಿ? ಷಿಕಾಗೋ
ಎಷ್ಟು ಜನ ಭಾಗಿ? 2500
ಗಣ್ಯರೆಷ್ಟು?  220

Advertisement
Advertisement

Udayavani is now on Telegram. Click here to join our channel and stay updated with the latest news.

Next