Advertisement

ಪ್ರಪಂಚದ ಇತಿಹಾಸ ಪರಂಪರೆಯ ನೆನಪುಗಳ ಗುರು ಕಲಾವಿದ

01:29 PM Apr 16, 2021 | Team Udayavani |

ನೆಲಮಂಗಲ: ಪ್ರಪಂಚದ ಇತಿಹಾಸ ಹಾಗೂ ಪರಂಪರೆಯನ್ನು ಚಿತ್ರದ ಮೂಲಕ ಜನರಿಗೆ ತಿಳಿಸುವ ಕಲಾವಿದ ಅದ್ಭುತ ಗುರುವಿದ್ದಂತೆ ಎಂದು ರಾಜ್ಯದ ಹಿರಿಯ ಇತಿಹಾಸ ಸಂಶೋಧಕ ಡಾ.ಎಚ್‌. ಎಸ್‌.ಗೋಪಾಲ್‌ರಾವ್‌ ಅಭಿಪ್ರಾಯಪಟ್ಟರು. ನಗರದ ಡಾ.ಬಿಆರ್‌ ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿ, ಕಲಾ ಕುಟೀರ ಹಾಗೂ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗ ದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಕಲಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಒಬ್ಬ ಶಿಲ್ಪಿ ಹಾಗೂ ಚಿತ್ರ ಕಲಾವಿದನ ಪರಿಶ್ರಮ ದಿಂದ ಮೂಡುವ ಕಲಾಕೃತಿಗಳು ಊಹಿಸಲಾಗದ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ. ಶಿವ,ವಿಷ್ಣು, ಬುದ್ಧನ ಜೀವನಶೈಲಿ, ಅವನ ರೂಪ ನಾವು ನೋಡಿಲ್ಲ ಆದರೆ ಕಲಾವಿದನಿಂದ ಬಂದ ಚಿತ್ರಗಳು, ಸನ್ನಿವೇಷಗಳು ಅವರನ್ನು ಜನರಿಗೆ ಬಹಳ ಅತ್ತಿರ ದಿಂದ ಪರಿಚಯಿಸುತ್ತವೆ ಎಂದರು. ಒಂದು ಚಿತ್ರವನ್ನು ಬರೆದು ಅದಕ್ಕೆ ಬಣ್ಣಗಳನ್ನು ಹಚ್ಚಿ ಹೊಸರೂಪವನ್ನು ನೀಡಿ ಮಾನವರು ಮನಸೋಲುವಂತೆ ಚಿತ್ರಕ್ಕೆ ಜೀವನೀಡುವ ಕಲಾವಿದನ ಶ್ರಮ ಶ್ಲಾಘ ನೀಯ ಎಂದರು.

ಸಾಹಿತಿ ಡಾ. ವೆಂಕಟೇಶ್‌ ಆರ್‌ ಚೌಥಾಯಿ ಮಾತನಾಡಿ, ವಿಶೇಷ ಕಲಾವಿದರನ್ನು ಭಾರತದಲ್ಲಿ ಬಹಳಷ್ಟು ಜನರನ್ನು ಕಾಣಬಹುದು. ಹಿಂದಿನ ಕಲಾವಿದರಿಂದ ಮೂಡಿಬಂದ ಚಿತ್ರಗಳು ಇಂದು ಜಗತ್ತಿನ ಇತಿಹಾಸವನ್ನು ದಾಖಲೆ ಮಾಡಲು ಸಾಕ್ಷಿಯಾಗಿರುವುದನ್ನು ಕಾಣಬಹುದು, ಇತ್ತೀಚಿಗೆ ಕಲಾವಿದರ ಸಂಖ್ಯೆ ಕ್ಷೀಣಿಸುತ್ತಿದೆ ಸರಕಾರ ಈಗಾಗಲೇ ಅನೇಕ ಯೋಜನೆಗಳ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಿದೆ, ವಿಶೇಷವಾಗಿ ಕಲಾವಿ ದರ ಪ್ರೋತ್ಸಾಹಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಕಲಾ ಪ್ರದರ್ಶನ: ಇಪ್ಪತ್ತಕ್ಕೂ ಹೆಚ್ಚು ಕಲಾವಿದರಿಂದ ಮೂಡಿಬಂದ ವಿಶೇಷ ಕಲಾಕೃತಿಗಳನ್ನು ಪ್ರದರ್ಶನ ಮಾಡಲಾಯಿತು. ಹಂಪಿ, ಬಾದಾಮಿ, ಬುದ್ಧ, ಗಂಡುಹೆಣ್ಣಿನ ಮಹತ್ವ ಸಾರುವ ಚಿತ್ರ, ತಾಯಿ ಮಗುವಿನ ಬಾಂಧ್ಯವ್ಯ ಸೇರಿದಂತೆ ವಿವಿಧ ಚಿತ್ರಗಳನ್ನು ಕಲಾ ಪ್ರದರ್ಶನದಲ್ಲಿ ಕಂಡುಬಂತು.

ವ್ಯಕ್ತಿ ಚಿತ್ರ ಉಚಿತ ವಿತರಣೆ: ಕಲಾ ಪ್ರದರ್ಶನದ ಸಮಯದಲ್ಲಿ ಸ್ಥಳದಲ್ಲಿಯೇ ಕಾರ್ಯಕ್ರಮಕ್ಕೆ ಬಂದ ವ್ಯಕ್ತಿಗಳ ಚಿತ್ರವನ್ನು ಬಿಡಿಸಿ ಅವರಿಗೆ ಉಚಿತವಾಗಿ ವಿತರಣೆ ಮಾಡಿದರು. ಅನೇಕ ಅವಿದ್ಯಾರ್ಥಿಗಳು ಚಿತ್ರ ಬಿಡುಸುವ ಕಲೆಯ ಬಗ್ಗೆ ಕಾರ್ಯಾಗಾರದಿಂದ ಪರಿಚಯ ಮಾಡಿಕೊಂಡರು.

Advertisement

ಹಿರಿಯ ಕಲಾವಿದ ಅಪ್ಪಾಸಾಹೇಬ್‌ ಗಾಣಿಗರ್‌, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಜಿ.ಹೂಗಾರ್‌, ಕಾರ್ಯದರ್ಶಿ ವೆಂಕಟೇಶ್‌.ಕೆ, ಮಕ್ಕಳ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಎನ್‌.ಜಿ ಗೋಪಾಲ್‌, ಕನ್ನಡ ಸಾಂಸ್ಕೃತಿ ರಂಗದ ಅಧ್ಯಕ್ಷ ಸಿದ್ದರಾಜು, ಕಲಾವಿದರಾದ ಅಶ್ವಿ‌ನಿ, ಕವಿತಾ, ಪ್ರವೀಣ್‌, ಶಬೀರ್‌ಅಹಮದ್‌, ಲಕ್ಷ್ಮಣ್‌ಗಾಣಿಗೇರ್‌, ಹನುಮಂತ್‌, ಮಂಜುನಾಥ್‌ಪ್ರಭು, ಭಾನುಪ್ರಕಾಶ್‌, ರಾಮಚಂದ್ರರಾವ್‌, ಸತೀಶ್‌, ಮಾರಣ್ಣ, ರಕ್ಷಿತ್‌, ಗೋವರ್ಧನ್‌, ಸಂದೀಪ್‌ ಸೂರ್ಯ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next