Advertisement

ಪಾರಂಪರಿಕ ತಾಣ ರಕ್ಷಣೆ ನಮ್ಮ ಹೊಣೆ

06:00 AM Apr 18, 2018 | |

ಉಡುಪಿ: ಮಾನವ ಅಭಿವೃದ್ಧಿಯನ್ನು ಗುರುತಿಸುವ, ಅಪೂರ್ವ ಹಿನ್ನೋಟವನ್ನು ತಿಳಿಯುವ ಯತ್ನವಾಗಿ ಪರಂಪರೆ ರಕ್ಷಣೆ ಉದ್ದೇಶದ “ಎ.18ರಂದು ವಿಶ್ವ ಪಾರಂಪರಿಕ (ತಾಣ) ದಿನ/’ ಆಚರಿಸಲಾಗುತ್ತಿದೆ. ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ) 1983ರಿಂದ ಈ ದಿನವನ್ನು ಆಚರಿಸುತ್ತಿದ್ದು, ಈ ಬಾರಿ ಸುಸ್ಥಿರ ಪ್ರವಾಸೋದ್ಯಮದ ಆಶಯವನ್ನು ಹೊಂದಿದೆ.  
ಪಾರಂಪರಿಕ ತಾಣಗಳೆಷ್ಟಿವೆ? 
ವಿಶ್ವದಲ್ಲಿ ಒಟ್ಟು  1,073 ಪಾರಂಪರಿಕ ತಾಣಗಳನ್ನು ಯುನೆಸ್ಕೋ ಗುರುತಿಸಿದೆ. ಇದರಲ್ಲಿ 832 ಸಾಂಸ್ಕೃತಿಕ, 206 ಸ್ವಾಭಾವಿಕ ಮತ್ತು ಇವೆರಡನ್ನೂ ಒಳಗೊಂಡಿರುವ 35 ತಾಣಗಳಿವೆ.

Advertisement

ಭಾರತದಲ್ಲಿ 36
ಭಾರತದಲ್ಲಿ ಯುನೆಸ್ಕೋ ಗುರುತಿಸಿದ 36 ತಾಣಗಳಿವೆ. ಇದರಲ್ಲಿ 7 ಪ್ರಾಕೃತಿಕ ಮತ್ತು 28 ಸಾಂಸ್ಕೃತಿಕ ತಾಣಗಳಿವೆ. ಈ ಹಿಂದೆ ಕಾರಾಗೃಹ ಆಗಿದ್ದು ಅನಂತರ ಶಾಲೆಯಾದ ಹಳೆಯ ಕಟ್ಟಡ ಬೋರ್ಡ್‌ ಹೈಸ್ಕೂಲ್‌, ಹಿಂದೆ ಜೈಲು ಆಗಿದ್ದು, ಅನಂತರ ತಾಲೂಕು ಕಚೇರಿ ಆದ ಉಡುಪಿಯ ಹಳೆ ತಾಲೂಕು ಕಚೇರಿ, ಬಾರಕೂರು ಕತ್ತಲೆ ಬಸದಿ, ಸೂರಾಲು ಅರಮನೆ ಸ್ಥಳೀಯವಾಗಿ ಪಾರಂಪರಿಕ ತಾಣಗಳೆಂದು ಗುರುತಿಸಲ್ಪಟ್ಟಿವೆ.
  
ಸೈಂಟ್‌ ಮೆರೀಸ್‌ ದ್ವೀಪ
ತೋನ್ಸೆ ಪಾರ್ಕ್‌ ಎಂದು ಪುರಾತನ ಹೆಸರಿರುವ ಸೈಂಟ್‌ಮೇರೀಸ್‌ ದ್ವೀಪ 4 ದ್ವೀಪಗಳ ಸಮೂಹ ಇದು  ಪಾರಂಪರಿಕ ತಾಣ ಎಂದು ಭಾರತೀಯ ಪುರಾತತ್ವ ಇಲಾಖೆಯಿಂದ ಗುರುತಿಸಲ್ಪಟ್ಟಿದೆ.   ಇಲ್ಲಿನ ಉತ್ತರ ದ್ವೀಪ ಬಸಾಲ್ಟ್ ರಯೋಡೇಸೈಟ್‌ ವರ್ಗದ ಶಿಲೆಗಳಿಂದ ರಚನೆಯಾಗಿದ್ದು ಷಡು½ಜ ಆಕೃತಿಯ ಶಿಲೆಗಳ ಸಮೂಹ ವಾಗಿದೆ. ಈ ರೀತಿಯ ಸುಂದರ ಷಡು½ಜ ಆಕೃತಿಯ ಶಿಲಾರಚನೆಗಳು ದೇಶದಲ್ಲಿ ಇಲ್ಲಿ ಮಾತ್ರ ಇವೆ ಎಂದು ಹೇಳಲಾಗಿದೆ.

ರಕ್ಷಣೆ ನಮ್ಮ ಹೊಣೆ  
ಜಿಲ್ಲೆಯ ಬಾರಕೂರಿನ ಕತ್ತಲೆ ಬಸದಿ, ಕಾರ್ಕಳದ ಜೈನ ಬಸದಿಗಳನ್ನು ನಾನು ವಿದೇಶಿಯರಿಗೆ ಪಾರಂಪರಿಕ ಸ್ಥಳಗಳೆಂದು ಪರಿಚಯಿಸುತ್ತಿದ್ದೇನೆ. ನಮ್ಮಲ್ಲಿ ಇರುವ ಐತಿಹಾಸಿಕ ಸ್ಥಳಗಳ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಅವುಗಳ ರಕ್ಷಣೆ, ಅಭಿವೃದ್ಧಿಯೂ ನಮ್ಮ ಹೊಣೆ .
– ಪ್ರಾಣೇಶ್‌ ಶೇಟ್‌,
ಟೂರಿಸ್ಟ್‌ ಗೈಡ್‌, ಉಡುಪಿ  

Advertisement

Udayavani is now on Telegram. Click here to join our channel and stay updated with the latest news.

Next